
ಪ್ರಗತಿವಾಹಿನಿ ಸುದ್ದಿ, ಗದಗ: ಮತದಾನಕ್ಕೆ ಬಂದ ಮಹಿಳೆ ಮೇಲೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಮಾಡಿದ್ದಾಗಿ ಆರೋಪಿಸಿದ್ದು ಈ ಘಟನೆ ಹಲವರನ್ನು ಕೆರಳಿಸಿದೆ.
ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ ಸಂಖ್ಯೆ 216ರಲ್ಲಿ ಈ ಘಟನೆ ನಡೆದಿದೆ. ಲಾಠಿಯಿಂದ ಹಲ್ಲೆ ನಡೆಸಿದ್ದಾರೆಂದು ಗ್ರಾಮಸ್ಥೆ ಹುಲಗೆಮ್ಮ ಆರೋಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಹಲವರು ಮತಗಟ್ಟೆಯತ್ತ ಧಾವಿಸಿ ಚುನಾವಣಾಧಿಕಾರಿಳೊಂದಿಗೆ ತೀವ್ರ ವಾಗ್ವಾದ, ತಳ್ಳಾಟ ನಡೆಸಿದ್ದಾರೆ. ಚುನಾವಣೆ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಮತಗಟ್ಟೆಗೆ ತೆರಳಿ ಜನರನ್ನು ಶಾಂತಗೊಳಿಸುತ್ತಿದ್ದು ಈ ಕುರಿತು ತನಿಖೆ ನಡೆಸಲಾಗುತ್ತಿದೆ.