*GOOD NEWS: ಬೆಳಗಾವಿಗೆ ಬರಲಿದೆ ಮತ್ತೊಂದು ವಂದೇ ಭಾರತ ರೈಲು*

ಪ್ರಗತಿವಾಹಿನಿ ಸುದ್ದಿ: ಈ ಭಾಗದ ಜನರ ಬಹುದಿನಗಳ ಬೇಡಿಕೆ ಬೆಂಗಳೂರು-ಬೆಳಗಾವಿ ವಂದೇ ಭಾರತ ರೈಲು ಬರುವ ಮುಂಚೆ ಪುಣೆ ಬೆಳಗಾವಿ ಮದ್ಯೆ ಮತ್ತೊಂದು ಒಂದೇ ಭಾರತ ರೈಲು ಸಂಚರಿಸಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಪುಣೆ-ಬೆಳಗಾವಿ-ಹುಬ್ಬಳ್ಳಿಗೆ ಒಂದು ವಂದೇ ಭಾರತ ರೈಲು ಸಂಚರಿಸುತ್ತಿದೆ. ಬೆಂಗಳೂರು- ಧಾರವಾಡ ರೈಲು ಬೆಳಗಾವಿವೆರೆಗೆ ವಿಸ್ತರಿಸಲು ಅನುಮೋದನೆ ದೊರೆತಿದೆ. ಇವುಗಳ ಜೊತೆ ಪುಣೆ-ಬೆಳಗಾವಿ ಮದ್ಯೆ ಮತ್ತೊಂದು ಒಂದೆ ಭಾರತ ರೈಲು ಸಂಚರಿಸಲಿದೆ.
ಭಾರತೀಯ ರೈಲ್ವೆಯಿಂದ ಮಹಾರಾಷ್ಟ್ರ ಪ್ರಮುಖ ನಗರವಾದ ಪುಣೆಯಿಂದ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ. ಪುಣೆಯಿಂದ ಬೆಳಗಾವಿ, ಶೇಗಾಂವ್, ವಡೋದರಾ ಹಾಗೂ ಸಿಕಂದರಾಬಾದ್ (ಹೈದರಾಬಾದ್) ನಗರಗಳಿಗೆ ಈ ರೈಲುಗಳು ಸಂಚಾರಿಸಲಿವೆ
ಪುಣೆಯಿಂದ ಹೈದರಾಬಾದ್ ಸಿಕಂದರಾಬಾದ್ ನಡುವೆ ಆರಂಭಿಸುತ್ತಿರುವ ಹೊಸ ವಂದೇ ಭಾರತ್ ರೈಲು ಮಹಾರಾಷ್ಟ್ರ ಕರ್ನಾಟಕ ಹಾಗೂ ತೆಲಂಗಾಣ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರೈಲು ದೌಂಡ್, ಸೋಲಾಪುರ ಮತ್ತು ಕಲಬುರಗಿದಲ್ಲಿ ನಿಲುಗಡೆ ಹೊಂದಲಿದೆ. ಇದರಿಂದ ರೈಲು ಪ್ರಯಾಣದ ಸಮಯ 2 – 3 ಗಂಟೆಗಳಷ್ಟು ಕಡಿಮೆಯಾಗುತ್ತದೆ.
ಈಗಾಗಲೇ ಹುಬ್ಬಳ್ಳಿ ಬೆಳಗಾವಿ ಪುಣೆ ನಡುವೆ ವಾರದಲ್ಲಿ ಮೂರು ಬಾರಿ ವಂದೇ ಭಾರತ್ ರೈಲು ಸೇವೆ ಇದೆ. ನಿತ್ಯ ಈ ಮಾರ್ಗದಲ್ಲಿ ಸೆಮಿ ಹೈಸ್ಪೀಡ್ ಓಡಿಸಬೇಕು ಎಂಬುದು ಇಲ್ಲಿನ ಬೆಳಗಾವಿ ಜನರ ಬೇಡಿಕೆಯಾಗಿತ್ತು. ಸದ್ಯ ರೈಲ್ವೆ ಇಲಾಖೆಯ ಬೆಳಗಾವಿ ಪುಣೆ ನಡುವೆ ಹೊಸ ವಂದೇ ಭಾರತ್ ಆರಂಭಿಸಿದೆ. ಸತಾರಾ, ಸಾಂಗ್ಲಿ ಮತ್ತು ಮಿರಾಜ್‌ನಲ್ಲಿ ಈ ರೈಲು ನಿಲುಗಡೆ ಹೊಂದಲಿದೆ.
ಅಧಿಕೃತ ವೇಳಾಪಟ್ಟಿ ಮತ್ತು ರೈಲುಗಳ ಸಂಚಾರದ ಬಗ್ಗೆ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಶೀಘ್ರದಲ್ಲಿ ರೈಲ್ವೆ ಇಲಾಖೆ ಮಾಹಿತಿ ನೀಡಲಿದೆ. ಇನ್ನು ಈ ಹೊಸ ಸೇವೆಗಳ ಘೋಷಣೆಯು ಪ್ರಯಾಣಿಕರಿಗೆ ಮತ್ತು ಸ್ಥಳೀಯ ವ್ಯಾಪಾರಗಳಿಗೆ ಸಂತಸ ಉಂಟು ಮಾಡಿದೆ.
ಈ ಹೊಸ ರೈಲುಗಳ ಟಿಕೆಟ್ ದರಗಳು 1500 ರೂ. – 2000 ರೂ. ಇರಬಹುದು. ಈ ರೈಲುಗಳು ವಂದೇ ಭಾರತ್ ರೈಲುಗಳ ಎಲ್ಲಾ ಸೌಲಭ್ಯಗಳನ್ನು ಹೊಂದಿವೆ. ಆರಾಮದಾಯಕ ಆಸನಗಳು, ಸ್ವಯಂಚಾಲಿತ ಬಾಗಿಲುಗಳು, Wi-Fi, ಆಧುನಿಕ ಶೌಚಾಲಯಗಳು ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಒಳಗೊಂಡಿರುತ್ತವೆ.