ಪ್ರಗತಿವಾಹಿನಿ ಸುದ್ದಿ, ನವದೆಹಲಿ: ದೇಶಾದ್ಯಂತ 2004ರ ನಂತರ ಮತ್ತು ಕರ್ನಾಟಕದಲ್ಲಿ 2006ರ ನಂತರ ನೇಮಕಗೊಂಡಿರುವ ಸರಕಾರಿ ನೌಕರರಿಗಿರುವ ನೂತನ ಪಿಂಚಣಿ ಯೋಜನೆ ಪುನರ್ ಪರಿಶೀಲಿಸಲು ಕೇಂದ್ರ ಸರಕಾರಿ ಸಮಿತಿಯೊಂದನ್ನು ನೇಮಕ ಮಾಡಿ ಗುರುವಾರ ಆದೇಶ ಹೊರಡಿಸಿದೆ.
ನಿಶ್ಚಿತ ಪಿಂಚಣಿ ಇಲ್ಲದೆ ಕಂಗಾಲಾಗಿದ್ದ ಲಕ್ಷಾಂತರ ನೌಕರರ ಪಾಲಿಗೆ ಇದೊಂದು ಶುಭ ಸುದ್ದಿ. ಮಾರ್ಚ್ 24ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಆದೇಶಿಸಿದ ಪ್ರಕಾರ ಈ ಸಮಿತಿ ರಚಿಸಲಾಗಿದೆ. ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ವಿವಿಧ ಇಲಾಖೆಗಳ ಮೂವರು ಸದಸ್ಯರಿರುತ್ತಾರೆ.
ಈಗ ಇರುವ ಪಿಂಚಣಿ ಯೋಜನೆಯಿಂದ ಸರಕಾರಿ ನೌಕರರಿಗೆ ಆಗಿರುವ ತೊಂದರೆ ಮತ್ತು ಅದರ ಸುಧಾರಣೆಗೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ಸಮಿತಿ ಪರಿಶೀಲಿಸಿ ವರದಿ ನೀಡಲಿದೆ. ಸಮಿತಿಗೆ ಅಗತ್ಯವಾದಲ್ಲಿ ಹೆಚ್ಚಿನ ಸದಸ್ಯರನ್ನು ಸೇರಿಸಿಕೊಳ್ಳಲು ಅವಕಾಸ ನೀಡಲಾಗಿದೆ.
ಪ್ರತಿಪಕ್ಷದ ಆಡಳಿತದಲ್ಲಿರುವ ಐದು ರಾಜ್ಯಗಳು ಈಗಾಗಲೇ 2004 ರ ನಂತರ ನೇಮಕಗೊಂಡ ನೌಕರರನ್ನು ಪಿಂಚಣಿಗಳನ್ನು ಖಾತರಿಪಡಿಸುವ ಹಳೆಯ ಪಿಂಚಣಿ ಯೋಜನೆಗೆ (OPS) ಬದಲಾಯಿಸಿರುವುದರಿಂದ, ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರವು NPS ನಿಂದ ಹೊರಬರುವ ಆಲೋಚನೆಯಲ್ಲಿದೆ. ಹಾಗಾಗಿ “ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅಳವಡಿಸಿಕೊಳ್ಳಲು” ಹೊಸ ವಿಧಾನವನ್ನು ವಿನ್ಯಾಸಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದರು.
“ಸರ್ಕಾರಿ ನೌಕರರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ ಎಂದು ಅಹವಾಲಿಗಳನ್ನು ಸ್ವೀಕರಿಸಲಾಗಿದೆ. ಹಣಕಾಸು ಕಾರ್ಯದರ್ಶಿಯ ಅಡಿಯಲ್ಲಿ ಸಮಿತಿಯನ್ನು ಸ್ಥಾಪಿಸಲು ನಾನು ಪ್ರಸ್ತಾಪಿಸುತ್ತೇನೆ. ಪಿಂಚಣಿಗಳ ಈ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ಸಾಮಾನ್ಯ ನಾಗರಿಕರನ್ನು ರಕ್ಷಿಸಲು ಹಣಕಾಸಿನ ವಿವೇಕವನ್ನು ಉಳಿಸಿಕೊಂಡು ಉದ್ಯೋಗಿಗಳ ಅಗತ್ಯತೆಗಳನ್ನು ತಿಳಿಸುವ ವಿಧಾನವನ್ನು ವಿಕಸನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.
ಸ್ವಾಗತ
ಎನ್ ಪಿಎಸ್ ಕುರಿತು ಪರಿಶೀಲಿಸಲು ಕೇಂದ್ರ ಸರಕಾರ ಸಮಿತಿ ರಚಿಸಿರುವುದನ್ನು ವಿಧಾನ ಪರಿಷತ್ ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಮಾಧ್ಯಮಿಕ ನೌಕರರ ಸಂಘದ ಕಾರ್ಯಾಧ್ಯಕ್ಷ ಅರುಣ ಶಹಾಪುರ ಸ್ವಾಗತಿಸಿದ್ದಾರೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ