GOOD NEWS – ಬೆಳಗಾವಿಗೆ ಹೊಸ ಇಎಸ್ಐಸಿ ಆಸ್ಪತ್ರೆ ಮಂಜೂರು: ಕಡಾಡಿ ಪ್ರಯತ್ನಕ್ಕೆ ಕೊನೆಗೂ ಯಶಸ್ಸು
The meeting took a decision to set up new ESIC hospitals in Belagavi (Karnataka), Shamshabad (Telangana), Baramati (Maharashtra), Kishangarh, Ajmer (Rajasthan), Balasore (Odisha), Kurnool (Andhra Pradesh) and Greater Noida (Uttar Pradesh).
— Bhupender Yadav (@byadavbjp) February 20, 2023
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಬೆಳಗಾವಿ ಮಹಾನಗರಕ್ಕೆ ಕೊನೆಗೂ ಹೊಸ ಇಎಸ್ಐಸಿ ಆಸ್ಪತ್ರೆ ಮಂಜೂರಾಗಿದೆ.
ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ ಅಧ್ಯಕ್ಷತೆಯಲ್ಲಿ ಇಂದು ನಡೆದ 190ನೇ ಇಎಸ್ಐಸಿ ಕಾರ್ಪೋರೇಶನ್ ಸಭೆಯಲ್ಲಿ ಈ ಕುರಿತು ಒಪ್ಪಿಗೆ ಸಿಕ್ಕಿದೆ. ಕರ್ನಾಟಕದ ಬೆಳಗಾವಿ ಸೇರಿದಂತೆ ದೇಶದ 7 ಪ್ರದೇಶಗಳಲ್ಲಿ ಹೊಸ ಇಎಸ್ಐಸಿ ಆಸ್ಪತ್ರೆ ನಿರ್ಮಿಸಲು ಒಪ್ಪಿಗೆ ನೀಡಲಾಗಿದೆ.
ಇಎಸ್ಐಸಿ ಕೇಂದ್ರ ಸರಕಾರದ ಆಸ್ಪತ್ರೆಯಾಗಿದ್ದು, ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ 2 ಮತ್ತು ಗುಲಬರ್ಗಾದಲ್ಲಿ ಒಂದು ಆಸ್ಪತ್ರೆ ಮಾತ್ರ ಇದ್ದು, ಇದು ರಾಜ್ಯದ 4ನೇ ಆಸ್ಪತ್ರೆಯಾಗಲಿದೆ.
ಈ ಆಸ್ಪತ್ರೆಯಿಂದ ಬೆಳಗಾವಿಯ ಒಂದು ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ. ಕಡಾಡಿ ಅವರು ಒಂದು ವರ್ಷದಿಂದ ಇದಕ್ಕಾಗಿ ಪ್ರಯತ್ನ ನಡೆಸಿದ್ದರು.
ಶಾಸಕ ಅಭಯ ಪಾಟೀಲ ಕೂಡ ವಿಧಾನಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದರು.
*ಅರುಣ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ*
https://pragati.taskdun.com/arun-singhhealthwellmangalore-hospital/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ