
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಂದಾಲ್ ನಿಂದ ಮೀರಜ್ ಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಎರಡು ಭೋಗಿಗಳು ಪಲ್ಟಿಯಾಗಿರುವ ಘಟನೆ ಬೆಳಗಾವಿ ಮಿಲಿಟರಿ ಮಹಾದೇವ ದೇವಸ್ಥಾಮದ ಬಳಿ ಇರುವ ರೈಲ್ವೆ ಹಳಿಯಲ್ಲಿ ಮಂಗಳವಾರ ನಡೆದಿದೆ.
ಸಧ್ಯ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಜಿಂದಾಲ್ ದಿಂದ ಮಿರಜ್ ಕಡೆಗೆ ಹೊರಟಿದ್ದ ಕಬ್ಬಿಣದ ಅದಿರು ತೆಗೆದುಕೊಂಡು ಹೋಗುತ್ತಿದ್ದ ರೈಲು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಪ್ಲಾಟಫಾರ್ಮ್ ಬದಲಿಸುವಾಗ ಹಳಿತಪ್ಪಿ ಉರುಳಿಬಿದ್ದಿದೆ.
ರೈಲಿನ ಡಬ್ಬಿಗಳಿಂದ ಕೆಲ ಕಾಲ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ರೈಲ್ವೆ ಸಿಬ್ಬಂದಿಗಳು ಆಗಮಿಸಿ ಸರಿಪಡಿಸಿದ್ದಾರೆ. ಈಘಟನೆಗೆ ನಿಖರ ಕಾರಣ ತಿಳಿಯಲು ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.