ಗೂಂಡಾ ಕಾಯ್ದೆ: ಶಿರಸಿಯ ಮಹ್ಮದ್ ಫಾರೂಕ್ ಬಂಧನ

ಶಿರಸಿ ಪೊಲೀಸರ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ಶಿರಸಿ –  ಶಿರಸಿ ಪೊಲೀಸರು ಗೂಂಡಾ ಕಾಯ್ದೆಯ ಅಡಿಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಕೊಲೆ, ದೊಂಬಿ, ಕೊಲೆಗೆಯತ್ನ, ಕಳ್ಳತನ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿರಸಿಯ ಕಸ್ತೂರ ಭಾ ನಗರದ ನಿವಾಸಿಯಾದ ಮಹ್ಮದ್ ಫಾರೂಕ್ ತಂದೆ ಶಫಿವುಲ್ಲಾ ಪಟೆಲ್ ನನ್ನು ಕರ್ನಾಟಕ ಅಕ್ರಮ ಭಟ್ಟಿ ಸಾರಾಯಿ ವ್ಯವಹಾರ, ಔಷಧಾಪರಾಧ, ಜೂಜುಕೋರ, ಗೂಂಡಾ, ಅನೈತಿಕ ವ್ಯವಹಾರಗಳ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನುಅಕ್ರಮವಾಗಿ ಆಕ್ರಮಿಸಿಕೊಳ್ಳುವ ಚಟುವಟಿಕೆಗಳ ಅಧಿನಿಯಮ ೧೯೮೫ ರನ್ವಯ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಅಪರಾಧಿಕ ಹಿನ್ನೆಲೆ:

ಕಸ್ತೂರ ಭಾ ನಗರದ ನಿವಾಸಿಯಾದ ಮಹ್ಮದ್ ಫಾರೂಕ್ ತಂದೆ ಶಫಿವುಲ್ಲಾ ಪಟೇಲ್ ಈತನ ವಿರುದ್ದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನ, ಕೊಲೆ, ಕೊಲೆಯಸಾಕ್ಷಿನಾಶ, ಕೊಲೆಗೆಸಂಚು, ಪ್ರಯತ್ನ, ದೊಂಬಿ, ಬಲಾತ್ಕಾರ, ಹಣ ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು.
ಈತನ ಅಕ್ರಮ ಅಪರಾಧಿಕ ಕೃತ್ಯ ಚಟುವಟಿಕೆಗಳ ಮೇಲೆ  ನಿಗಾ ವಹಿಸಲು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಎಂಓಬಿ ಶೀಟ್, ರೌಡಿ ಶೀಟ್ ಗಳನ್ನು ತೆರೆಯಲಾಗಿತ್ತು, ಆದಾಗ್ಯು ಮಹ್ಮದ್ ಫಾರೂಕ್   ಎಸ್.ಡಿ.ಪಿ.ಐ ಸಂಘಟನೆಯೊಂದಿಗೆ ಸೇರಿಕೊಂಡು, ಪುಂಡರ ಗುಂಪು ಕಟ್ಟಿಕೊಂಡು ಅಪರಾಧಿಕ ಕೃತ್ಯಗಳನ್ನು ಎಸಗುತ್ತಾ ತನ್ನ ಹುಂಬು – ಕ್ರೂರ ಸ್ವಭಾವದಿಂದ ಸಾರ್ವಜನಿಕರನ್ನು ಹೆದರಿಸುವ, ಸಾಮಾನ್ಯ ಜನರಲ್ಲಿ ಭಯಭೀತಿಯನ್ನು ಸೃಷ್ಟಿಸಿ ಮತಿಯ ಕೋಮುಗಲಭೆಗಳು ಉಂಟಾಗುವಂತೆ ಪ್ರಚೋದನೆ ನೀಡುತ್ತಾ ಸಮಾಜದ ಶಾಂತಿ ಸುವ್ಯವಸ್ಥೆಗೆ ನಿರಂತರವಾಗಿ ಅಡ್ಡಿಪಡಿಸುತ್ತಿದ್ದ, ಈತನ ಚಟುವಟಿಕೆಗಳನ್ನು ನಿಗ್ರಹಿಸಲು ಅಪರಾಧ ಮುಂಜಾಗ್ರತಾ ಕಾಯ್ದೆಯಡಿ ಕ್ರಮ ಕೈಗೊಂಡರೂ ಸಹ ಶಾಂತಿ, ಸದ್ವರ್ತನೆಯಿಂದ ವರ್ತಿಸದೆ ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಕಾನೂನು ಸುವ್ಯವಸ್ಥೆಗೆ ಕಂಟಕಪ್ರಾಯವಾಗಿದ್ದ ಈತನ ಚಟುವಟಿಕೆಗಳನ್ನು ನಿಗ್ರಹಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಬದರಿನಾಥ ರವರ ಮಾರ್ಗದರ್ಶನದಲ್ಲಿ ಶಿರಸಿ ಪೊಲೀಸ್ ಉಪವಿಭಾಗಾಧಿಕಾರಿ ರವಿ ಡಿ ನಾಯ್ಕ ನೇತೃತ್ವದಲ್ಲಿ ಮಹ್ಮದ್ ಫಾರೂಕ್ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು  ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು ಕಾರವಾರರವರಿಗೆ ಈತನ ವಿರುದ್ದ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲು ವರದಿ ಸಲ್ಲಿಸಲಾಗಿತ್ತು. ಇಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಧಂಡಾದಿಕಾರಿ ಹರೀಶ ಕುಮಾರರವರು  ಮಹ್ಮದ್ ಫಾರೂಕ್ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶ ಮಾಡಿದ್ದು ಶಿರಸಿ ಪೊಲೀಸ್ ಉಪಾಧೀಕ್ಷಕ ರವಿ ಡಿ.ನಾಯ್ಕ ರವರ ನೇತೃತ್ವದ ತಂಡ  ಕುಖ್ಯಾತ ರೌಡಿ ಶೀಟರ್ ಮಹ್ಮದ್ ಫಾರೂಕ್ ನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
 ಮುಂದಿನ ದಿನಗಳಲ್ಲಿ ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ಅಪರಾಧೀಕ ಕೃತ್ಯ, ಚಟುವಟಿಕೆಗಳಲ್ಲಿ ನಿರತರಾದ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತ ರೌಡಿ ಆಸಾಮಿಗಳನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗುವುದು ಅಂತಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button