Latest

ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಗೋಪಾಲಸ್ವಾಮಿ ಆನೆ ಸಾವು; ಸಿಎಂ ಟ್ವೀಟ್ ಮೂಲಕ ಸಂತಾಪ

ಪ್ರಗತಿವಾಹಿನಿ ಸುದ್ದಿ; ಮೈಸೂರು :-ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಗೋಪಾಲಸ್ವಾಮಿ ಎನ್ನುವ ಆನೆಯು ಕಾಡಾನೆ ಜೊತೆ ಕಾದಾಡಿ ಸಾವನ್ನಪ್ಪಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ಗೋಪಾಲಸ್ವಾಮಿ ಹುಣಸೂರಿನ ಮತ್ತಿಗೋಡು ಶಿಬಿರದಲ್ಲಿ ಕಾಡಾನೆ ಜೊತೆ ಕಾದಾಡಿ ಸಾವನ್ನಪ್ಪಿರುವ ಸುದ್ದಿ ತಿಳಿದು ಬೇಸರವಾಯಿತು.ಗಜರಾಜನ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಓಂ ಶಾಂತಿಃ’ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

39 ವರ್ಷದ ಗೋಪಾಲಸ್ವಾಮಿ ಎನ್ನುವ ಆನೆ ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಉದ್ಘಾಟನೆಯಲ್ಲಿ ಭಾಗಿಯಾಗಿತ್ತು. ಈ ಬಾರಿಯ ದಸರಾದಲ್ಲಿ ಗೋಪಾಲಸ್ವಾಮಿ ಆನೆಯು ಮರದ ಅಂಬಾರಿ ಹೊತ್ತು ಎಲ್ಲರ ಗಮನ ಸೆಳೆದಿತ್ತು. ಶಾಂತ ಸ್ವಾಭಾವದ ಈ ಆನೆ 14 ದಸರಾ ಮಹೋತ್ಸವದಲ್ಲಿ ಭಾಗಿಯಾಗಿ ಜನ ಮನ್ನಣೆ ಗಳಿಸಿತ್ತು. ಅಲ್ಲದೇ ಭವಿಷ್ಯದಲ್ಲಿ ಮೈಸೂರು ದಸರಾ ಅಂಬಾರಿ ಹೊರುವ ಸಾಮರ್ಥ್ಯವಿರುವ ಆನೆ ಎಂದೇ ಗುರುತಿಸಿಕೊಂಡಿತ್ತು.

ಹುಣಸೂರಿನ ಮತ್ತಿಗೋಡಿನ ಸಾಕಾನೆ ಶಿಬಿರದಲ್ಲಿ ಪಳಗಿಸಲು ಸೆರೆ ಹಿಡಿಯಲಾಗಿದ್ದ ಅಯ್ಯಪ್ಪ ಎಂಬ ಆನೆ ಜೊತೆಗೆ ನಿನ್ನೆ ಗೋಪಾಲಸ್ವಾಮಿ ಆನೆ ಕಾದಾಡಿ ಗಾಯಗೊಂಡಿತ್ತು. ಬಳಿಕ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ‌ ಪರಿಶೀಲನೆ ನಡೆಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸಾವನ್ನಪ್ಪಿದೆ.

ಬೆಳಗಾವಿ ಸೇರಿದಂತೆ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

https://pragati.taskdun.com/karnatakaheavy-rain25-district/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button