Belagavi NewsBelgaum NewsKannada NewsKarnataka NewsNationalPolitics

*ನಾಳೆ ಬೆಳಗಾವಿಯಲ್ಲೂ ಆಸ್ಪತ್ರೆಗಳ ಸೇವೆ ಬಂದ್: ಡಾ.ರವೀಂದ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಲ್ಕತ್ತಾ ಘಟನೆ ಖಂಡಿಸಿ ನಾಳೆ ಬೆಳಗಾವಿ ಜಿಲ್ಲೆಯಾದ್ಯಂತ ಓಪಿಡಿ ಸೇವೆ ಬಂದ್ ಇರಲಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಬೆಳಗಾವಿ ಜಿಲ್ಲಾಧ್ಯಕ್ಷ ಡಾ.ರವೀಂದ್ರ ಆನಗೋಳ ಅವರು ತಿಳಿಸಿದ್ದಾರೆ.

ಇಂದು ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಕತಾ ಘಟನೆ ಖಂಡಿಸಿ ನಾಳೆ  ಬೆಳಗಾವಿ ಜಿಲ್ಲೆಯಲ್ಲಿರುವ ಸರ್ಕಾರಿ ಖಾಸಗಿ ಕ್ಲೀನಿಕ್, ಆಸ್ಪತ್ರೆಗಳ ಓಪಿಡಿ, ಐಪಿಡಿ ಸೇವೆ ಸ್ಥಗಿತ ಮಾಡುತ್ತೇವೆ. ಎಮರ್ಜೆನ್ಸಿ ಸೇವೆ ಮಾತ್ರ ಇರುತ್ತೆ. ನಾಳೆ ಬೆಳಿಗ್ಗೆ 6ರಿಂದ ಶುಕ್ರವಾರ ಬೆಳಗಿನ 6 ಗಂಟೆಯವರೆಗೆ ಸೇವೆ ಸ್ಥಗಿತ ಮಾಡುತ್ತೇವೆ. 24 ಗಂಟೆಗಳ ಕಾಲ ನಾವು ಪ್ರತಿಭಟನೆ ಮಾಡುತ್ತೇವೆ.  ಕೇಂದ್ರದ ಮೆಡಿಕಲ್ ಅಸೋಸಿಯೇಶನ್ ನಿರ್ದೇಶನದ ಮೇರೆಗೆ ನಾವು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ಮಹಿಳಾ ವೈದ್ಯೆ ಮೇಲೆ ಅತ್ಯಾಚಾರ ಕೊಲೆ ಖಂಡಿಸಿ ಓಪಿಡಿ ಸೇವೆ ಸ್ಥಗಿತ ಮಾಡಲಿದ್ದೇವೆ. ಘಟನೆ ನಡೆದು ವಾರ ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮೂರನೇ ವರ್ಷದ ವ್ಯದ್ಯಕೀಯ ವಿದ್ಯಾರ್ಥಿ ಕೆಲಸ ಮುಗಿಸಿ  ಮಲಗಿರುವಾಗ ಅಮಾನುಷವಾಗಿ ಕೊಲೆ ಮಾಡಲಾಗಿದೆ. ವೈದ್ಯರ ಮೇಲೆ ಪದೇ ಪದೇ ಈ ರೀತಿ ನಡೆಯುತ್ತಿರುವುದನ್ನ ಖಂಡಿಸಿದರೂ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ. ಮಹಿಳೆ ವೈದ್ಯರಿಗೆ ಹಾಗೂ ಮಹಿಳಾ ವಿದ್ಯಾರ್ಥಿಗಳಿಗೆ ಸರ್ಕಾರ ಯಾವುದೇ ಸುರಕ್ಷಾ ಸೌಲಭ್ಯ ಕೊಡುತ್ತಿಲ್ಲ. ನ್ಯಾಯ ನೀಡುವಂತೆ ನಮ್ಮ ಹೋರಾಟ ನಡೆಯುತ್ತಿದೆ. ಆಸ್ಪತ್ರೆಗಳಲ್ಲಿ ಸುರಕ್ಷಿತವಾದ ಪರಿಸರ ನಿರ್ಮಾಣವಾಗಬೇಕು. ಇಂತವರ ವಿರುದ್ಧ ಕಟ್ಟುನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

 https://pragativahini.com/kle-hospital-will-be-closed-tomorrow/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button