*ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ನೌಕರ*

ಪ್ರಗತಿವಾಹಿನಿ ಸುದ್ದಿ: ಟೆಸ್ಕಾಂನಲ್ಲಿ ಸೀನಿಯರ್ ಅಕೌಂಟೆಂಟ್ ಆಗಿದ್ದ ನೌಕರ ಕೌಟುಂಬಿಕ ಕಲಹದಿಂದ ಬೇಸತ್ತು ಇಡೀ ಕುಟುಂಬವನ್ನೇ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿಯ ಟೆಸ್ಕಾಂನಲ್ಲಿ ಸೀನಿಯರ್ ಅಕೌಂಟೆಂಟ್ ಆಗಿದ್ದ ಸಂತೋಷ್ ಎಂಬಾತ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ. ಗಂಡ ಹೆಂಡ್ತಿಯ ನಡುವೆ ಅನ್ನೋನ್ಯತೆ ಇರ್ಲಿಲ್ಲ. ಆಗಿಂದ್ದಾಗ್ಗೆ ಇಬ್ಬರ ನಡುವೆ ಜಗಳ ಆಗ್ತಿತ್ತು. ಸಂಸಾರದಲ್ಲಿ ಸಾಮರಸ್ಯದ ಕೊರತೆ ಇತ್ತು.
ಕಲಬುರಗಿಯ ಗಾಬರೆ ಲೇಔಟ್‌ನ ಅಪಾರ್ಟೆಂಟ್‌ನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಆಫೀಸ್ ನಿಂದ ಬುರತ್ತಿದ್ದಂತೆಯೇ ಪತ್ನಿ ಜೊತೆ ಜಗಳ ಶುರುವಾಗಿದೆ. ಸಂತೋಷ್, ನೋಡ ನೋಡುತ್ತಿದ್ದಂತಯೇ ಶೃತಿ (35), ಮಕ್ಕಳಾದ ಮುನಿಶ್(09) ಹಾಗೂ ನಾಲ್ಕು ತಿಂಗಳ ಮಗು ಅನಿಶ್ ನನ್ನ ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾರೆ.
ನಾಲ್ವರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಜಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಲಾಗಿದೆ. ಸ್ಟೇಷನ್ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.