Kannada NewsKarnataka NewsLatest

*ಸಬ್ ರಜಿಸ್ಟ್ರಾರ್ ಗಳಿಗೆ ಸರಕಾರ ಗಂಭೀರ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಸರ್ಕಾರದ ಸುತ್ತೋಲೆಗಳ ಹಾಗೂ ಪತ್ರಗಳ ನಿರ್ದೇಶನನ್ನಯ ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿ ಅಧೀನದಲ್ಲಿನ ಸ್ವತ್ತುಗಳಿಗೆ ಕಡ್ಡಾಯವಾಗಿ ಇ-ಆಸ್ತಿ, ಇ-ಸ್ವತ್ತು ಬಳಸಿ ನೋಂದಣಿ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ.

ಆದಾಗ್ಯೂ ಕೆಲವೊಂದು ಉಪನೋಂದಣಾಧಿಕಾರಿಗಳು ಇ-ಖಾತೆ ಇದ್ದಾಗ್ಯೂ ತಪ್ಪಾಗಿ ಅರ್ಥೈಸಿಕೊಂಡು, ಗೊಂದಲ ಸೃಷ್ಟಿ ಮಾಡುತ್ತಿರುವುದು ಕೇಂದ್ರ ಕಛೇರಿಯ ಗಮನಕ್ಕೆ ಬಂದಿದೆ.

ಈ ಮೂಲಕ ರಾಜ್ಯದಲ್ಲಿನ ಉಪನೋಂದಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳಿಗೆ ಕಡ್ಡಾಯವಾಗಿ ಇ-ತಂತ್ರಾಂಶದಿಂದ ನಿಶ್ಚಿತವಾದ ಇ-ಸ್ವತ್ತು ಹಾಗೂ ಇ-ಆಸ್ತಿಯನ್ನು ಇ-ತಂತ್ರಾಂಶದಿಂದ ಮಾಹಿತಿ ಪಡೆದು ‘ಎ’ ಖಾತೆ ಅಥವಾ ‘ಬಿ’ ಖಾತೆ ಇದ್ದರೂ ಸಹ ನೋಂದಣಿ ಮಾಡಲು ಸೂಚಿಸಲಾಗಿದೆ.

ಸರ್ಕಾರದ ಸುತ್ತೋಲೆ ಹಾಗೂ ಪತ್ರಗಳಲ್ಲಿನ ನಿರ್ದೇಶನಗಳನ್ನು ಉಲ್ಲಂಘಿಸಿ ನೋಂದಣಿ ಮಾಡಲು ಅವಕಾಶವಿರುವುದಿಲ್ಲ. ಸರ್ಕಾರದ ಸುತ್ತೋಲೆ ಹಾಗೂ ಕೇಂದ್ರ ಕಛೇರಿಯ ನಿರ್ದೇಶನಗಳನ್ನು ಉಲ್ಲಂಘಿಸಿ ಸ್ಥಿರಾಸ್ತಿಗಳನ್ನು ನೋಂದಾಯಿಸುವ ಉಪನೋಂದಣಾಧಿಕಾರಿಗಳ ವಿರುದ್ಧ KCSR ನಿಯಮಗಳಡಿ ಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Home add -Advt

Related Articles

Back to top button