Latest

ಜಲಶಕ್ತಿ ಮಂತ್ರಾಲಯ ಸ್ಥಾಪನೆ -ಮೋದಿ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ

ಕಾಂಗ್ರೆಸ್ ಸರಕಾರ ಇಷ್ಟು ವರ್ಷ ಆಡಳಿತ ನಡೆಸಿದರೂ ನೀರಾವರಿ ವಿಷಯದಲ್ಲಿ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರಕಾರ ಮುಂದಿನ ದಿನಗಳಲ್ಲಿ ಜಲಶಕ್ತಿ ಮಂತ್ರಾಲಯ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ಚಿಕ್ಕೋಡಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಯೋಜನೆ ತರಲಾಗುವುದು ಎಂದರು. 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ಯೋಜನೆ ತರಲಾಗುವುದು ಎಂದೂ ಹೇಳಿದರು.

ಸೈನಿಕರನ್ನು ಗತಿ ಇಲ್ಲದವರು ಎನ್ನು ರೀತಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಮಾತನಾಡಿದ್ದಾರೆ. ಸೈನಿಕರಿಗೆ ಮಾಡಿದ ಅವಮಾನವಿದು. ಇಂತವರ ಪರಿವಾರವನ್ನೇ ಸಂಪೂರ್ಣ ಹೊರಹಾಕಬೇಕು ಎಂದು ಮೋದಿ ಹೇಳಿದರು.

Home add -Advt

ಕಾಂಗ್ರೆಸ್ ಮತ್ತು ಕರ್ನಾಟಕದ ಸಮ್ಮಿಶ್ರ ಸರಕಾರದ ಕುರಿತು ತೀವ್ರ ಟೀಕಾ ಪ್ರಹಾರ ನಡೆಸಿದ ಅವರು, ಸಾಲಮನ್ನಾ ವಿಷಯವನ್ನೂ ವ್ಯಂಗ್ಯವಾಡಿದರು. ಸೇರಿದ್ದ ಜನಸಮೂಹವನ್ನು ಸೇರಿಸಿಕೊಂಡು ನಾವೆಲ್ಲರೂ ಈ ದೇಶದ ಚೌಕೀದಾರರು ಎಂದು ಕನ್ನಡದಲ್ಲೇ ಹೇಳಿಸಿದ ಮೋದಿ, ಈ ಭಾಗದ ಐತಿಹಾಸಿಕ ನಾಯಕರನ್ನು ಸ್ಮರಿಸಿದರು. 

ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸ್ವಾಗತಿಸಿದರು. ಜಗದೀಶ ಶೆಟ್ಟರ್, ಪ್ರಭಾಕರ ಕೋರೆ, ಸುರೇಶ ಅಂಗಡಿ, ಅಣ್ಣಾ ಸಾಹೇಬ ಜೊಲ್ಲೆ, ತಾರಾ, ಶಶಿಕಲಾ ಜೊಲ್ಲೆ, ಅಭಯ ಪಾಟೀಲ, ಅನಿಲ ಬೆನಕೆ, ಆನಂದ ಮಾಮನಿ, ರಮೇಶ ಕತ್ತಿ, ಲಕ್ಷ್ಮಣ ಸವದಿ, ದುರ್ಯೋಧನ ಐಹೊಳೆ, ಪಿ.ರಾಜೀವ ಮೊದಲಾದವರು ಇದ್ದರು. 

Related Articles

Back to top button