Kannada NewsLatest

ಕೋವಿಡ್ ಪಾಸಿಟೀವ್ ರೋಗಿಗಳಿಗೆ ಉಚಿತ ಆಯುಷ್ ಕಿಟ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಕೋವಿಡ್ ಸೋಂಕಿತರಿಗೆ ನೀಡುವ ಆಯುಷ್ ಔಷಧಿ ಕಿಟ್ ಗಳನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಬಿಡುಗಡೆಗೊಳಿಸಿದರು.

ಇಂದು ಪ್ರವಾಸಿ ಮಂದಿರದ ಆವರಣದಲ್ಲಿ ಆಯುಷ್ ಔಷಧಿ ಕಿಟ್ ಗಳನ್ನು ಬಿಡುಗಡೆಗೊಳಿಸಿದರು. ಕರ್ನಾಟಕ ಸರ್ಕಾರದಿಂದ ಬಂದಿರುವ ಆಯುಷ್‌ ಕಿಟ್‌ಗಳು ಆಯುಷ್ ಇಲಾಖೆಯ ಮಾರ್ಗಸೂಚಿಯಗಳ‌ ಅನ್ವಯ ಸೌಮ್ಯ ಮತ್ತು ಸಾಧಾರಣ ಕೋವಿಡ್-19 ಪಾಸಿಟೀವ್ ರೋಗಿಗಳಿಗೆ ಅನುಕೂಲವಾಗಲಿವೆ. ಈ ಕಿಟ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಸಿಟೀವ್ ರೋಗಿಗಳಿಗೆ ನೀಡಲಾಗುವುದು.

ಈ ಆಯುಷ್‌ ಕಿಟ್‌ಗಳಲ್ಲಿರುವ ಔಷಧಿಗಳು ಕರೋನಾ ಸೋಂಕಿನ ತೀವ್ರತೆಯನ್ನು ಕಡಿಮೆಗೊಳಿಸುವುದರ ಜೊತೆಗೆ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಕರೋನಾ ನಂತರದಲ್ಲಿ ಬರುವ ಸುಸ್ತು ಆಯಾಸ ಹಾಗೂ ಇನ್ನಿತರೆ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಕಿಟ್‌ನಲ್ಲಿರುವ ಔಷಧಿಗಳು ಸುರಕ್ಷಿತ :

ಈ ಕಿಟ್‌ ಆಯುಷ್ -64 ಮಾತ್ರೆಗಳು, ಅಶ್ವಗಂಧ ಚೂರ್ಣ, ಚವನ್ ಪ್ರಾಶ್ ಮತ್ತು ಪುಷ್ಟಿದಾಯಕ ಶರಬತ್-ಇ ಉನ್ನಾಬ್ ಶಿರಪ್ ಇವುಗಳನ್ನು ಒಳಗೊಂಡಿರುತ್ತದೆ.

ಆಯುಷ್‌ ಕಿಟ್‌ಗಳನ್ನು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಉಚಿತವಾಗಿ ಒದಗಿಸಲಾಗುವುದು. ಆಯುಷ್ ಕಿಟ್‌ನಲ್ಲಿ ಬರುವ ಎಲ್ಲಾ ಔಷಧಿಗಳು ಸುರಕ್ಷಿತವಾಗಿರುತ್ತವೆ. ಯಾವುದೇ ಅಡ್ಡಪರಿಣಾಮ ಇರುವುದಿಲ್ಲ.

ಈ ಸಂದರ್ಭದಲ್ಲಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ, ಐ.ಸಿ.ಎಂ.ಆರ್(ಆಯುಷ್) ಸಂಶೋಧನಾಧಿಕಾರಿಗಳಾದ ಡಾ.ಚಂದ್ರಶೇಖರ
ಸಿದ್ದಾಪೂರ ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಡಿ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button