ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಳೆದ ಎರಡು ದಿನದಿಂದ, ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ, ಪಡಿತರ ಚೀಟಿದಾರರಿಗೆ, ಪ್ಲಾಸ್ಟಿಕ್ ಅಕ್ಕಿಯನ್ನು ಹಂಚಿಕೆ ಮಾಡಲಾಗುತ್ತಿದೆಯೆಂದು ಸುದ್ದಿ ಹರಡಿತ್ತು.
ಈ ವಿಷಯವಾಗಿ ಗ್ರಾಮಕ್ಕೆ ಆಹಾರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ನ್ಯಾಯಬೆಲೆ ಅಂಗಡಿಯಲ್ಲಿ ಹಂಚಿಕೆ ಮಾಡುತ್ತಿದ್ದ ಪಡಿತರ ಅಕ್ಕಿಯ ಮಾದರಿ ಪಡೆದು, ಅದರ ಸತ್ಯಾ ಸತ್ಯತೆ ಪರೀಕ್ಷಿಸಲು ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಪ್ರಯೋಗಾಲಯದ ಅಂತಿಮ ವರದಿ ಬಂದಿದ್ದು, ನ್ಯಾಯಬೆಲೆ ಅಂಗಡಿಯಲ್ಲಿ ಹಂಚಿಕೆ ಮಾಡಿರುವ ಅಕ್ಕಿಯಲ್ಲಿ ಯಾವುದೇ ರೀತಿಯಲ್ಲಿ, ಬ್ಯಾಹ ವಸ್ತುಗಳಾಗಲಿ/ಪ್ಲಾಸ್ಟಿಕ್ ಆಗಲಿ ಕಂಡು ಬಂದಿಲ್ಲವೆಂದು ವರದಿ ನೀಡಿದ್ದಾರೆ.
ಸಿಡಿ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ