*ನೀರು ಬಂದ್ ಮಾಡಲು, ಡ್ಯಾಂ ಎತ್ತರಿಸಲು ಅವರ ತಾತನ ಮನೆಯದ್ದಲ್ಲ; ಸಚಿವ ಕಾರಜೋಳ ಆಕ್ರೋಶ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಲವಿವಾದ ಸೃಷ್ಟಿಸಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಚಿವ ಕಾರಜೋಳ, ಗಡಿ ವಿವಾದ ಚರ್ಚೆ ಮಹಾರಾಷ್ಟ್ರ ಅಧಿವೇಶನದಲ್ಲಿಯೂ ನಡೆದಿದೆ. ಆದರೆ ಎನ್ ಸಿಪಿ ಶಾಸಕ ಜಯಂತ್ ಪಾಟೀಲ್, ಕರ್ನಾಟಕಕ್ಕೆ ನೀರು ಬಿಡದಂತೆ ಒತ್ತಾಯಿಸಿದ್ದಾರೆ. ನೀರು ಹಂಚಿಕೆ ಬಂದ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಡ್ಯಾಂಗಳನ್ನು ಎತ್ತರಿಸುವ ಮೂಲಕ ಕರ್ನಾಟಕಕ್ಕೆ ನೀರು ಹರಿಯದಂತೆ ತಡೆಹಿಡಿಯಬೇಕು ಎಂದು ಶಾಸಕರು ಹೇಳಿದ್ದಾರೆ. ಡ್ಯಾಂಗಳನ್ನು ಎತ್ತರ ಮಾಡಲು ಅವರ ತಾತನ ಮನೆಯದ್ದಲ್ಲ, ನ್ಯಾಯಯುತವಾಗಿ ನೀರು ಹಂಚಿಕೆ ಮಾಡಬೇಕು. ನಮಗೆ ಸಿಗಬೇಕಾದ ನೀರು ನ್ಯಾಯಯುತವಾಗಿದೆ. ನೀರು ಬಂದ್ ಮಾಡಲು ಯಾರಿಗೂ ಅಧಿಕಾರವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
*ಗಡಿ ವಿವಾದ ಬೆನ್ನಲ್ಲೇ ಜಲ ವಿವಾದ ಸೃಷ್ಟಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ*
https://pragati.taskdun.com/karnataka-maharashtra-border-issuencp-mla-jayanth-patilmaharashtra-session/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ