Belagavi NewsBelgaum NewsKannada NewsKarnataka News

*ಓಂಬುಡ್ಸಪರ್ಸನ್ ಕಾರ್ಯಾಲಯ ಉದ್ಘಾಟಿಸಿದ ಜಿ.ಪಂ ಸಿಇಒ ರಾಹುಲ್ ಶಿಂಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಪಂಚಾಯತ ಆವರಣದಲ್ಲಿರುವ ನೂತನವಾಗಿ ನವೀಕರಿಸಲಾಗಿರುವ ಓಂಬುಡ್ಸಪರ್ಸನ್ ಕಾರ್ಯಾಲಯವನ್ನು ಇಂದು ಜಿಲ್ಲಾ ಪಂಚಾಯತ ಸಿ.ಇ.ಒ ರಾಹುಲ್ ಶಿಂಧೆ ಅವರು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಾಖಲಾಗಿರುವ ಪ್ರಕರಣಗಳ ಕುರಿತಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸದರಿ ಪ್ರಕರಣಗಳನ್ನು ನಿಯಮಾನುಸಾರ ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ತಿಳಿಸಿದರು. 

ಈ ಸಂದರ್ಭದಲ್ಲಿ ಓಂಬುಡ್ಸ ಪರ್ಸನ್ ಡಾ. ಡಿ.ಎಸ್. ಹವಾಲದಾರ, ಜಿ.ಪಂ. ಯೋಜನಾ ನಿರ್ದೇಶಕ ರವಿ ಎನ್ ಬಂಗಾರೆಪ್ಪನವರ, ಉಪ ಕಾರ್ಯದರ್ಶಿ ಬಸವರಾಜ್ ಹೆಗ್ಗನಾಯಕ್, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ್, ಪಿ.ಆರ್.ಇ.ಡಿ ಎಇಇ ಪ್ರದೀಪ್ ಸಾವಂತ ಅಧಿಕ್ಷಕರಾದ ಮುರಗಾಮಠ, ಪ್ರಕಾಶ ಕರೆನ್ನವರ, ದಿಲಾವರ ನನದಿಕರ, ಬಸವರಾಜ್ ಯರಗಟ್ಟಿ ಹಾಗೂ ಜಿ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.

Home add -Advt

Related Articles

Back to top button