ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲುವು ಸಾಧಿಸಲೇ ಬೇಕೆಂದು ಪಣ ತೊಟ್ಟಿರುವ ಶಾಸಕ ಗಣೇಶ್ ಹುಕ್ಕೇರಿ, ಕೆಪಿಸಿಸಿ ಅಧ್ಯಕ್ಷರ ಸೂಚನೆಗೂ ಮುನ್ನವೇ ಚಿಕ್ಕೊಡಿ ಸದಲಗಾ ಮತ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿಯ ಕಾಂಗ್ರೆಸ್ ಕಾರ್ಯರ್ತರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸ್ವಗ್ರಾಮ ಯಕ್ಸಂಬಾದಲ್ಲಿ ಸರಣಿ ಸಭೆ ಮಾಡುತ್ತಿರುವ ಶಾಸಕರು, ಪ್ರತಿ ಗ್ರಾಮ ಪಂಚಾಯತಿಯ ಎಲ್ಲ ಸಮುದಾಯದ ನಾಯಕರು ಹಾಗೂ ಕಾರ್ಯರ್ತರ ಸಮಸ್ಯೆ ಆಲಿಸುವುದರ ಜೊತೆಗೆ, ಪ್ರತಿ ವಾರ್ಡ್ ನಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ರೆ ಶಮನ ಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರತಿ ಗ್ರಾಮ ಪಂಚಾಯತಿಯಲ್ಲಿ ಸಮಿತಿ ರಚನೆ:
ಪ್ಯಾನಲ್ ರಚನೆ ವೇಳೆ ಕಾಂಗ್ರೆಸ್ ಕಾರ್ಯರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡಬಾರದೆಂಬ ಉದ್ದೆಶದಿಂದ, ಪ್ರತಿ ಪಂಚಾಯ್ತಿಗೆ ಎಲ್ಲ ಸಮುದಾಯದ ನಾಯಕರನ್ನ ಒಳಗೊಂಡ ಒಂದು ಸಮಿತಿಯನ್ನು ರಚನೆ ಮಾಡಿದ್ದು, ಸಮಿತಿಯ ಸದಸ್ಯರು ಎಲ್ಲರ ಅಭಿಪ್ರಾಯ ಸಂಗ್ರಹಣೆ ಮಾಡಿ ಪ್ಯಾನಲ್ ರಚನೆ ಮಾಡಬೇಕು. ಅಲ್ಲದೆ ಪ್ಯಾನೆಲ್ ರಚನೆಯ ವೇಳೆ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಚುನಾವಣೆ ಮುಗಿಯೊವರೆಗೂ ಸಮಿತಿಯ ಸದಸ್ಯರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಶಾಸಕ ಹುಕ್ಕೇರಿ ಸೂಚನೆ ನೀಡಿದ್ದಾರೆ.
ಈಗಾಗಲೇ ಒಂದು ಸುತ್ತಿನ ಸಭೆ ಮುಗಿಸಿರುವ ಗಣೇಶ್ ಹುಕ್ಕೆರಿ, ಡಿಸೆಂಬರ್ ೮ ರಿಂದ ಎರಡನೆ ಹಂತದ ಸಭೆಯನ್ನು ನಡೆಸಲಿದ್ದಾರೆ. ಎರಡನೆ ಹಂತದ ಸಭೆಗೆ ಬರುವಾಗ ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಪ್ರತಿ ವಾರ್ಡ್ ನ ಸಾದಕ ಭಾದಕಗಳ ಬಗ್ಗೆ ತಿಳಿದುಕೊಂಡು ಬರುವಂತೆ ಸಮಿತಿ ಸದಸ್ಯರಿಗೆ ಸೂಚನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಗಣೇಶ್ ಹುಕ್ಕೇರಿ, ನಾನು ಹಾಗೂ ನಮ್ಮ ನಾಯಕರಾದ ಪ್ರಕಾಶ ಹುಕ್ಕೇರಿ ಯವರು ಮಾಡಿದ ಜನಪರ ಕೆಲಸಗಳೆ ನಮ್ಮ ಅಭ್ಯರ್ಥಿಗಳಿಗೆ ಶ್ರೀ ರಕ್ಷೆ ಆಗಿದ್ದೂ, 25 ಕ್ಕೆ 25 ಗ್ರಾಮ ಪಂಚಾಯತಿಗಳು ಕಾಂಗ್ರೆಸ್ ವಶ ಆಗಬೇಕು ಅದಕ್ಕೆ ನಾನು ಶಕ್ತಿ ಮಿರಿ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ