ಸರಕಾರಿ ಶಾಲೆಗಳನ್ನು ಹೈಟೆಕ್ ಮಾಡಲು ಮುಂದಾದ ಗ್ರಾಪಂ ಸದಸ್ಯರು

ಪ್ರಗತಿವಾಹಿನಿ ಸುದ್ದಿ, ಶಿರಸಿ –   ಶಿರಸಿಯ ಚಿಪಗಿ, ದಮ್ಮನ ಬೈಲ್ ಹಾಗೂ ನಾರಾಯಣಗುರು ನಗರದ ಸರಕಾರಿ ಶಾಲೆಗಳನ್ನು ಹೈಟೆಕ್ ಮಾಡಲು ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಜನರ ಸಹಕಾರ ಕೋರಿದ್ದಾರೆ.
  ಎಲ್ಲಾ ಸರ್ಕಾರಿ ಅಂಗನವಾಡಿ ಶಾಲೆ , ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು  ಹೈ ಟೆಕ್ ಮಾಡುವ ಉದ್ದೇಶ ಹೊಂದಿರುವುದಾಗಿ ಗ್ರಾಮ ಪಂಚಾಯ್ತಿ ಸದಸ್ಯ ನವೀನ ಶೆಟ್ಟಿ ತಿಳಿಸಿದರು.
ಈಗಾಗಲೇ   ನಾರಾಯಣ ಗುರು ನಗರದ ಅಂಗನವಾಡಿ ಕಾರ್ಯಕರ್ತರ ಜೊತೆ ಊರಿನ ಕೆಲವು  ಪ್ರಮುಖರು ಅಂಗನವಾಡಿಯನ್ನು ಹೈಟೆಕ್ ಮಾಡಲು ಯಶಸ್ವಿಯಾಗಿದ್ದಾರೆ.
 ಗುರುವಾರ  ದಮನಬೈಲ್ ಅಂಗನವಾಡಿ ಕಾರ್ಯಕರ್ತರ ಜೊತೆ ಸ್ಥಳೀಯ ಉದ್ಯಮಿ  ವಿನಾಯಕ್ ಶೆಟ್ಟಿ ಅವರು ಸೇರಿ ಶಾಲೆಗೆ ಸ್ಮಾರ್ಟ್ ಟಿವಿ ದೇಣಿಗೆ ನೀಡಿದ್ದಾರೆ.
  ಒಂದೊಂದು ಶಾಲೆಯನ್ನು ಹೈ ಟೆಕ್ ಮಾಡಲು ಸರ್ಕಾರಿ ಸವಲತ್ತಿನ ಜೊತೆ  ಊರಿನ ಪ್ರಮುಖರು  ಮುಂದಾದರೆ ಎಲ್ಲಾ ಸೇರಿ ಕೈಜೋಡಿಸಿ ಶಾಲೆಯನ್ನು ಹೈಟೆಕ್ ಮಾಡಿದರೆ ನಮ್ಮ ಊರಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ನಾವೆಲ್ಲ ಸೇರಿ ಕೊಡುವ ಬಹುದೊಡ್ಡ ಉಡುಗೊರೆಯಾಗಲಿದೆ ಎಂಬುದು ಗ್ರಾಮ ಪಂಚಾಯ್ತಿ ಸದಸ್ಯರ ಅಭಿಪ್ರಾಯವಾಗಿದೆ.
https://pragati.taskdun.com/latest/whatsapp-status-to-irritate-people-of-other-castes-two-arrested-in-sirsi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button