
ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಪಿಡಿಒ ಕಿರುಕುಳಕ್ಕೆ ಬೇಸತ್ತ ವಾಟರ್ ಮ್ಯಾನ್ ಗ್ರಾಮ ಪಂಚಾಯಿತಿ ಕಚೇರಿ ಬಾಗಿಲ ಬಳಿಯೇ ನೇಣಿಗೆ ಕೊರಳೊಡ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹೊಂಗನೂರಿನಲ್ಲಿ ನಡೆದಿದೆ.
ಚಿಕ್ಕೋಸ ನಾಯಕ್ ಆತ್ಮಹತ್ಯೆಗೆ ಶರಣಾಗಿರುವ ವಾಟರ ಮ್ಯಾನ್. ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಚಿಕ್ಕೋಸ ಅವರಿಗೆ ಸಂಬಳ ನೀಡಿರಲಿಲ್ಲವಂತೆ. ಸಂಬಳಕ್ಕಾಗಿ ಕೇಳಿದರೆ ಪಿಡಿಒ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ಗದರಿಸಿ ಕಳುಹಿಸುತ್ತಿದ್ದರಂತೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ಪತಿ ಮೋಹನ್ ಕುಮಾರ್ ಹಾಗೂ ಪಿಡಿಒ ರಾಮೇಗೌಡ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಗ್ರಾಮಸ್ಥರು ಗ್ರಾಮ ಪಂಚಾಯತ್ ಬಳಿ ಬಂದಾಗ ವಾಟರ್ ಮ್ಯಾನ್ ನೇಣಿಗೆ ಕೊರಳೊಡ್ಡಿರುವುದು ಕಂಡು ಆಘಾತಗೊಂಡಿದ್ದಾರೆ. ಚಾಮರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.