ಗ್ರಾಮ ಸಭೆ ನಡೆಯುವ ಮೂರು ದಿನ ಮುಂಚಿತವಾಗಿ ಕ್ರಿಯಾಯೋಜನೆ ರೂಪಿಸಿ ಅನುಮೋದನೆ : ಉಪಾಧ್ಯಕ್ಷ ಕಲ್ಮೇಶ ಆರೋಪ
ಪ್ರಗತಿವಾಹಿನಿ ಸುದ್ದಿ: ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಗ್ರಾಪಂ ಸಭಾ ಭವನದಲ್ಲಿ ಸೋಮವಾರದಂದು ಜರುಗಿದ, ಗ್ರಾಮ ಸಭೆಯಲ್ಲಿ ಕೆಲವು ಅಧಿಕಾರಿಗಳು ಗೈರಾಗಿದ್ದು ಹಾಗೂ ಸಾರ್ವಜನಿಕರು ಕಡಿಮೆ ಸಂಖ್ಯೆಯಲ್ಲಿ ಹಾಜರಾಗಿದ್ದರಿಂದ ಗ್ರಾಮ ಸಭೆಯನ್ನು ರದ್ದು ಮಾಡಬೇಕೆಂದು ಸಭೆಗೆ ಹಾಜರಾದ ಸಾರ್ವಜನಿಕರು ಆಗ್ರಹಿಸಿದರಿಂದ ಸಭೆಯನ್ನು ಅರ್ಧದಲ್ಲಿ ಕೈ ಬಿಟ್ಟು ಮುಂದಿನ ತಿಂಗಳಲ್ಲಿ ಎಲ್ಲಾ ಅಧಿಕಾರಿಗಳಿಗೆ ನೋಟೀಸ್ ನೀಡಿ ಸಾರ್ವಜನಿಕರಿಗೆ ಸಭೆಯ ಕುರಿತು ಮಾಹಿತಿ ನೀಡಿ ಮತ್ತೆ ಗ್ರಾಮ ಸಭೆಯನ್ನು ಕರೆಯಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಬಸವರಾಜ ಭೂತಾಳಿ ಹೇಳಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ಕಲ್ಮೇಶ ಗಾಣಗಿ ಮಾತನಾಡಿ, ಗ್ರಾಮ ಸಭೆ ನಡೆಯುವ ಮೂರು ದಿನ ಮುಂಚಿತವಾಗಿ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದುಕೊಡಿದ್ದಾರೆ ಎಂದು ಆರೋಪಿಸಿದ ಅವರು ಕಾನೂನು ಬಾಹಿರವಾಗಿ ಕಾಣದ ಕೈಗಳ ಕುತಂತ್ರಗಳಿಂದ ಗ್ರಾಮ ಸಭೆ ನಡೆಯದೆ ಅನುಮೋದನೆಗೊಂಡ ಕ್ರಿಯಾಯೋಜನೆಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು.
ಗ್ರಾಮ ಸಭೆ ನಡೆಯುವ ಮುಂಚಿತವಾಗಿ ಕ್ರಿಯಾಯೋಜನೆಯನ್ನು ಅನುಮೋದನೆ ಮಾಡಿಕೊಂಡು ಈಗ ಈ ಸಭೆಯನ್ನು ನಡೆಸುವ ಮೂಲಕ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶ ಇವರದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ತಮ್ಮ ಬೆಂಬಲ ಸದಸ್ಯರೊಂದಿಗೆ ಸಭೆಯಿಂದ ಅರ್ಧದಲ್ಲಿಯೇ ಹೊರಗಡೆ ನಡೆದ ಘಟನೆ ಜರುಗಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ