Belagavi NewsBelgaum NewsKannada NewsKarnataka NewsLatest

*ಅದ್ಧೂರಿ ಗಣೇಶೋತ್ಸವ:ವಿಸರ್ಜನಾ ಮೆರವಣಿಗೆಗೆ ಹೇಗಿದೆ ಸಿದ್ಧತೆ?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಳೆ ಬೆಳಗಾವಿ ನಗರದಲ್ಲಿ ಗಣೇಶ ವಿಸರ್ಜನೆ ನಡೆಯಲಿದ್ದು, ನಗರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪೊಲೀಸರು ಬಂದಿದ್ದಾರೆ. 500 ಪೊಲೀಸ್ ಅಧಿಕಾರಿಗಳು ಹಾಗೂ 3 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. 

ನಾಳೆ ಸಾಯಂಕಾಲ ಬೆಳಗಾವಿ ನಗರದಲ್ಲಿ ಅತ್ಯಂತ ಸಡಗರದಿಂದ ವಿನಾಯಕನ ವಿಜರ್ನನಾ ಕಾರ್ಯಾರಂಭವಾಗಲಿದೆ. ಇದನ್ನು ನೋಡಲು ಬೇರೆ ಬೇರೆ ಜಿಲ್ಲೆಯಿಂದಲೂ ಜನ ಸೇರುತ್ತಾರೆ.‌ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಳಗಾವಿ ನಗರದಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. 

ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ಎಷ್ಟು..?

1 ರ್ಯಾಪಿಡ್ ಆಕ್ಸನ್ ಫೋರ್ಸ್, 10 ಕೆಎಸ್ಆರ್ ತುಕಡಿ, 9 ಸಿಎಆರ್ ತುಕಡಿಗಳು ಬಂದಿವೆ. ಸುಮಾರು 700 ಕ್ಯಾಮರಾ, 14 ಡ್ರೋನ್ ಗಳನ್ನು ಬಂದೋಬಸ್ತ್ ನಲ್ಲಿ ಬಳಸುತ್ತಿದ್ದೇವೆ. ನಾಳೆ ಸಾಯಂಕಾಲ 4 ಗಂಟೆಯಿಂದ ಈ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದಲ್ಲಿ ಇರಲಿದ್ದಾರೆ. 

Home add -Advt

ಶಾಂತಿಯುತವಾಗಿ ಗಣೇಶೋತ್ಸವ ನಡೆಯುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ. .ಸಾರ್ವಜನಿಕರು ನಮ್ಮ ಪೊಲೀಸರ ನಿರ್ದೇಶನ ಪಾಲಿಸಿ, ಶಾಂತಿಯುತವಾಗಿ ಮೆರವಣಿಗೆ ನಡೆಯಲು ಸಹಕರಿಸುವಂತೆ ಕೋರಿದರು. ನಿಮ್ಮ ಸೇವೆಗೆ ನಾವು 24/7 ಸಿದ್ಧರಿರುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಕರೆ ನೀಡಿದರು.

ಬಹಳಷ್ಟು ಮಂಡಳಿಗಳು ಸಾಂಪ್ರದಾಯಿಕ ಕಲಾ ತಂಡಗಳನ್ನು ಬಳಸುವುದಾಗಿ ಹೇಳಿವೆ. ಇನ್ನು ಡಿಜೆ ಬಳಸುವವರು ಶಬ್ದ ಮಾಲಿನ್ಯ ಮಾಡಬಾರದು. ಯಾಕೆಂದರೆ ಮೆರವಣಿಗೆ ಮಾರ್ಗದಲ್ಲಿ 65 ಆಸ್ಪತ್ರೆಗಳಿವೆ. ಅಲ್ಲಿನ ರೋಗಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಕಳೆದ ಹತ್ತು ವರ್ಷಗಳಲ್ಲಿ ಏನೇನು ಸಮಸ್ಯೆಗಳು ಆಗಿದ್ದವು. ಅವುಗಳನ್ನು ಪಟ್ಟಿ ಮಾಡಿದ್ದೇವೆ. ಈ ಬಾರಿ ಆ ಸಮಸ್ಯೆಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸಬೇಕು.‌

ನಾಳೆ ಬೆಳಗಾವಿ ನಗರದ 1019, ಬೆಳಗಾವಿ ಗ್ರಾಮೀಣ ಭಾಗದ 650ಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. 

ಮೆರವಣಿಗೆ ವೇಳೆ ಕರ್ತವ್ಯದಲ್ಲಿರುವ ಪೊಲೀಸರಿಗೆ 10ಕ್ಕೂ ಅಧಿಕ ಕಡೆ ಚಹ ಮತ್ತು ನೀರಿನ ವ್ಯವಸ್ಥೆ ಇರಲಿದೆ. ಜೊತೆಗೆ ಊಟ ಪಾರ್ಸಲ್ ನೀಡಲಾಗುತ್ತದೆ. ಅದೇರೀತಿ ಮಧ್ಯರಾತ್ರಿ ಹೊಟ್ಟೆ ಹಸಿಯುವ ಹಿನ್ನೆಲೆಯಲ್ಲಿ ಫೈವ್ ಸ್ಟಾರ್ ಚಾಕಲೇಟ್, ಚುಕ್ಕಿ, ಫ್ರೂಟಿ ಒಳಗೊಂಡ ಒಂದು ಚಿಕ್ಕ ಎನರ್ಜಿ ಕಿಟ್ ನೀಡಲಾಗುತ್ತದೆ. ರೇನ್ ಕೋಟ್, ರಿಪ್ಲೆಕ್ಟರ್ ಜಾಕೇಟ್ ವಿತರಿಸುತ್ತಿದ್ದು, ಮಳೆ ಬಂದರೂ ಸಮಸ್ಯೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಶಾಂತಿಯುತವಾಗಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ನಡೆಯುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಕೈಗೊಂಡಿದ್ದೇವೆ. ಬೆಳಗಾವಿ ನಗರ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ 3 ಸಾವಿರಕ್ಕೂ ಅಧಿಕ ಪೊಲೀಸರು ಕರ್ತವ್ಯದಲ್ಲಿ ಇರಲಿದ್ದಾರೆ. ಇಡೀ ನಗರವು ಪೊಲೀಸ್ ಕಣ್ಗಾವಲು ಇರಲಿದೆ. ಹಾಗಾಗಿ, ಯಾರೂ ಕೂಡ ಶಾಂತಿ ಕದಡಲು ಯತ್ನಿಸಬಾರದು. ಒಂದು ವೇಳೆ ಆ ರೀತಿ ಯತ್ನಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೊರಸೆ ಎಚ್ಚರಿಕೆ ನೀಡಿದ್ದಾರೆ.

Related Articles

Back to top button