ಅಜ್ಜಿಯ ಸಂಕಷ್ಟಕ್ಕೆ ಮರುಗಿದ ಶಾಸಕಿ; ಪೆನ್ಶನ್ ವ್ಯವಸ್ಥೆಯ ಭರವಸೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಕುದ್ರೆಮನಿ ಗ್ರಾಮದ ಈ ಹಿರಿಯ ಅಜ್ಜಿ ಸುಮಾರು ನಲವತ್ತು ವರ್ಷಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡಿದ್ದಾಳೆ.
ಅಂದಿನಿಂದಲೂ ಜೀವನ ಸಾಗಿಸುವುದಕ್ಕೆ ಪರಿತಪಿಸುತ್ತಿದ್ದಾಳೆ. ಇಷ್ಟು ವರ್ಷವಾದರೂ ಆಕೆಗೆ ಸರಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಯಾವುದೇ ತರಹದ ಪೆನ್ಸನ್ ಹಾಗೂ ರೇಶನ್ ಕಾರ್ಡ್ ಕೂಡ ಸಿಕ್ಕಿಲ್ಲ.
ಅಜ್ಜಿಯು ತನ್ನ ಸಮಸ್ಯೆಗಳನ್ನು ಭಾನುವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬಳಿ ಹೇಳಿಕೊಂಡಳು. ತಕ್ಷಣ ಸ್ಪಂದಿಸಿದ ಹೆಬ್ಬಾಳಕರ್, ಅಜ್ಜಿಗೆ ವೃದ್ದಾಪ್ಯವೇತನ, ರೇಶನ್ ಕಾರ್ಡ್ ಮತ್ತಿತರ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಸಂಬಂಧಿಸಿದ ಅಧಿಕಾರಿಗಳ ಜೊತೆ ಈ ಬಗ್ಗೆ ಮಾತನಾಡಿ, ಕೂಡಲೆ ಅಜ್ಜಿಯ ಸಂಕಷ್ಟಕ್ಕೆ ಸ್ಪಂದಿಸುವಂತೆ ಸೂಚಿಸಿದರು.
20 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ
ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಖನಗಾಂವ ಕೆ ಚ್ ಗ್ರಾಮದ ಶಾಲೆಯ ಕಟ್ಟಡದ ಕಾಮಗಾರಿಗೆ ಪೂಜೆ ನೆರವೇರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಪಾಟೀಲ, ತಾಲೂಕ ಪಂಚಾಯತ್ ಸದಸ್ಯ ನೀಲೇಶ ಚಂದಗಡಕರ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಹೇಶ ಸುಗೆನ್ನವರ, ಚನ್ನರಾಜ ಹಟ್ಟಿಹೊಳಿ, ವಿಠ್ಠಲ, ಉದಯ, ಮಾರುತಿ, ಶಂಕರ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ