Kannada NewsKarnataka NewsLatest

Great! – ಬೆಳಗಾವಿ ಜಿಲ್ಲಾ ಪೊಲೀಸ್ ಅಮೋಘ ಸಾಧನೆ

8.58 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದು ವಾರಸುದಾರರಿಗೆ ಮರಳಿಸಿದ ಬೆಳಗಾವಿ ಜಿಲ್ಲಾ ಪೊಲೀಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 2020 -21ನೇ ಸಾಲಿನಲ್ಲಿ ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿರುವ 8.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಬೆಳಗಾವಿ ಜಿಲ್ಲಾ ಪೊಲೀಸರು ಸೋಮವಾರ ವಾರಸುದಾರರಿಗೆ ಮರಳಿಸಿದರು.

Home add -Advt

1.32 ಕೋಟಿ ರೂ. ಬಂಗಾರ 1.20 ಕೋಟಿ ರೂ. ನಗದು ಸೇರಿದಂತೆ ಆಭರಣ, ವಾಹನ, ಮೊಬೈಲ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಒಟ್ಟೂ 206 ಪ್ರಕರಣಗಳು ಈ ಸಂದರ್ಭದಲ್ಲಿ ದಾಖಲಾಗಿದ್ದವು.

ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ಅಮರನಾಥ ರಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.  ಜಿಲ್ಲೆಯ ಸಾವಿರಾರು ಪೊಲೀಸ್ ಸಿಬ್ಬಂದಿ ಪ್ರಕರಣಗಳನ್ನು ಬೇಧಿಸಲು ಶ್ರಮಿಸಿದ್ದರು.

ಪತ್ತೆ ಹಚ್ಚಲಾದ ಮಹತ್ವದ ಪ್ರಕರಣಗಳು

1. ಕಾಗವಾಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:77/2020 ಕಲಂ:98 ಕೆಪಿ ಆಕ್ಷ ನೇದ್ದರಲ್ಲಿ ದಿನಾಂಕ:16.06.2020 ರಂದು ಶೇಡಬಾಳ ಗ್ರಾಮದ ಹತ್ತಿರ ಸಂಶಯುಕ್ತ 5 ಜನ ಆರೋಪಿತರಾದ 1 ಅಭಯಸಿಂಹ ಗಾಯಕವಾಡ ಸಾ; ಉಪ್ಪರಿ ಜಿಲ್ಲಾ: ಕೊಲ್ಲಾಪೂರ ಹಾಲಿ:ಬೆಳಗಾವಿ ನಗರ 2. ಆಶಿತೋಶ ಖಿಲಾರಿ ಸಾ: ಸನಡಿ ತಾ: ಮಾನ್ ಜಿಲ್ಲಾ ಸಾತಾರ ಹಾಲಿ: ಬೆಳಗಾವಿ ನಗರ 3. ಅಕ್ಷಯ ಬಾಳಾಸಾಬ್ ದೇಸಾಯಿ ಸಾ:ಅರ್ಜುನಿ ತಾ:ಕಾಗಲ್ ಹಾಲಿ: ಬೆಳಗಾವಿ ನಗರ ರವರನ್ನು ದಸ್ತಗೀರ ಮಾಡಿ ಅವರ ವಶದಲ್ಲಿಂದ 01,08,54,150/- ರೂ ವಶಪಡಿಸಿಕೊಂಡಿದ್ದು ಅದೆ.

2. ಚಿಕ್ಕೋಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:78/2020 ನೇದ್ದರ ದರೋಡೆ ಪ್ರಕರಣದಲ್ಲಿ ದಿನಾಂಕ:12.06.2020 ರಂದು 09 ಜನರಾದ ಆರೋಪಿತರಾದ 1. ಗುರುನಾಥ ಹಾಳ ಸಾ:ಇಟ್ನಾಳ 2. ಕಲೀಂ ಮಾಲದಾರ ಸಾ: ಚಿಂಚಲಿ 3, ದಾದಾಸಾಬ್, ಶಂಕರ ಟೋನಿ ಸಾಸಂಬರಗಿ 4. ಜನಾರ್ಧನ ಗೇತ್ ಸಾಪಿಂಪಿಲವಾಡಿ ರಾಜ್ಯ: ಮಹಾರಾಷ್ಟ್ರ 5, ದಿನೇಶ ಕೊಳ್ಳಿ ಸಾ:ಸಂಬರಗಿ ತಾ:ಅಥಣಿ 6, ಶಿವಾನಂದ ಪನದಿ ಸಾ:ಮುಗಳಖೋಡ 7. ಪಾಂಡುರಂಗ ಮಾಲದಿನ್ನಿ ಸಾ: ಘಟಪ್ರಭಾ ತಾ:ಗೋಕಾಕ 8. ಸಚಿನ್ ಚೌಗಲಾ ಸಾ:ನಾಗನೂರ ಪಿ ಎ, ತಾ: ಅಥಣಿ 9. ಯಲ್ಲಾಲಿಂಗ ಹಾಳ್ಳಳ್ಳಿ ಸಾ: ಇಟ್ನಾಳ ತಾ: ರಾಯಬಾಗ ರವರನ್ನು ದಸ್ತಗೀರ ಮಾಡಿ ದರೋಡೆ ಮಾಡಿದ್ದ 01 ಲಾರಿ ಆಕಿ 20,00,000/ ರೂಪಾಯಿ ಹಾಗೂ 13,00,000/- ರೂಪಾಯಿ ಕಿಮ್ಮತ್ತಿನ ಅರಿಶಿನವನ್ನು ವಶಪಡಿಸಿಕೊಂಡಿರುತ್ತಾರೆ.

3. ಅಥಣಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:325/2020 ನೇದ್ದರಲ್ಲಿ ಲಾಭಕ್ಕಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ದಿನಾಂಕ:12.10.2020 ರಂದು ಕೂಗನೊಳ್ಳಿ ಗ್ರಾಮದಲ್ಲಿ ಆರೋಪಿತನಾದ 1. ನವನಾಥ ಬಾಪಸಾಬ್‌ ಬಾಬರ್ ಸಾ: ಜಂಬಗಿ ತಾ: ಆಥಣಿ 2. ಗುರುಸಿದ್ದ ರಾಮಚಂದ್ರ ಕೊಳ್ಳಕರ್ ಸಾ:ಜಂಬಗಿ ತಾ: ಅಥಣಿ ಇವರನ್ನು ಬಂಧಿಸಿ 01 ಕೆ.ಜಿ 491 ಗ್ರಾಂ ಬಂಗಾರ ಅಕಿ: 75,00,000/- ರೂ. ವಶಪಡಿಸಿಕೊಂಡಿದ್ದು ಅದೆ.

4. ಕುಡಚಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:105/2021 ನೇದ್ದರ ಕಳ್ಳತನ ಮಾಡಿದ ಪ್ರಕರಣದಲ್ಲಿ ದಿನಾಂಕ:20.08.2021 ರಂದು ಸುತ್ತಟ್ಟಿ ಕ್ರಾಸ್ ಹತ್ತಿರ 4 ಜನ ಆರೋಪಿತರಾದ ಬಸವರಾಜ ಸನದಿ ಸಾ: ಕೊಳ್ಳಿಗುಡ್ಡ 2. ದಯಾನಂದ ಸನದಿ ಸಾಕೊಳ್ಳಿಗುಡ್ಡ 3. ಸಿದ್ರಾಮ್ ಪಟಾಯತ್ ಸಾ:ಯಪಾರಟ್ಟಿ 4. ಚಿದಾನಂದ ಲಾಲಿ ಸಾ:ಕೊಳ್ಳಿಗುಡ್ಡ ರವರನ್ನು ಬಂಧಿಸಿ ಕಳ್ಳತನ ಮಾಡಿದ್ದ 03 ಟ್ರಾಕ್ಟರ ಇಂಜಿನ್, 8 ಟ್ರೇಲರ್ ಹಾಗೂ 01 ರೂಟರ್ ವಶಪಡಿಸಿಕೊಂಡು ಅಕಿ: 34,50,000/- ರೂ ವಶಪಡಿಸಿಕೊಂಡಿರುತ್ತದೆ.

5. ಗೋಕಾಕ ಶಹರ ಠಾಣೆ ಗುನ್ನಾ ನಂ:87/2021 ನೇದ್ದರ ಕಳ್ಳತನ ಪ್ರರಕಣದಲ್ಲಿ ದಿನಾಂಕ:18.08.2021 ರಂದು ಕಡಬಗಟ್ಟಿ ರಸ್ತೆಯಲ್ಲಿ 4 ಜನರಾದ 1. ಉಮೇಶ ಈರಪ್ಪ ಸತ್ತಿ ಸಾ:ಹಿಡಕಲ್ ತಾ:ಹುಕ್ಕೇರಿ 2. ಶಿವಪ್ಪ ಕಲ್ಲಪ್ಪ ಚಂಗನಾಳೆ ಸಾ: ಬೆಲ್ಲದ ಬಾಗೇವಾಡಿ 3. ವಿನೋದ ಬಾಳಪ್ಪ ಪಾಟೀಲ ಸಾ: ಬೆಲ್ಲದ ಬಾಗೇವಾಡಿ 4. ಸದ್ದಾಂ ಹುಸೇನ್ ಅಪ್ಪಾಸಾಬ ನೆರ್ಲಿ ಸಾ: ಬೆಲ್ಲದ ಬಾಗೇವಾಡಿ ರವರನ್ನು ಬಂಧಿಸಿ ಕಳ್ಳತನ ಮಾಡಿದ 45 ಗ್ರಾಂ ಬಂಗಾರ ಅಕಿ: 2,02,000/- ರೂ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮ ಹಾಗೂ ಪಟ್ಟಣಗಳಲ್ಲಿ ಕಳ್ಳತನ ಮಾಡಿದ 25 ಮೋಟಾರ ಸೈಕಲ್ ಅಕಿ: 8,25,000/- ರೂ ವಶಪಡಿಸಿಕೊಂಡಿದ್ದು ಇರುತ್ತದೆ.

6. ಅಂಕಲಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 66/2021 ನೇದ್ದರ ಮೋಟಾರ ಸೈಕಲ್ ಕಳ್ಳತನ ಪ್ರಕರಣದಲ್ಲಿ ಅಂಕಲಿ ಗ್ರಾಮದ ಅಂಬೇಡ್ಕರ ನಗರದ ಹತ್ತಿರ ರಾಜು ಬಾಳಪ್ಪ ಬಡ್ಡಿ ಹಾಲಿ:ಹಾರೂಗೇರಿ ಇತನನ್ನು ಬಂಧಿಸಿ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮ ಹಾಗೂ ಪಟ್ಟಣಗಳಲ್ಲಿ ಕಳ್ಳತನ ಮಾಡಿದ 23 ಮೋಟಾರ ಸೈಕಲ್ ಆಗಿರುತ್ತದೆ. ಮೊಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡು ಅಕಿ:7,31,000/- ರೂ

7. ಮುರಗೋಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 234/2021 ನೇದ್ದರ ಕಳವು ಪ್ರಕರಣದಲ್ಲಿ ದಿನಾಂಕ:14.10.2021 ರಂದು ಯರಗಟ್ಟಿ ಗ್ರಾಮದಲ್ಲಿ ಪ್ರಶಾಂತ ಶಂಕರಶಾ ಕಟವಟೆ ಸಾಟಿಪ್ಪು ನಗರ ಹುಬ್ಬಳ್ಳಿ ದಸ್ತಗೀರ ಮಾಡಿ ಕಳತನ ಮಾಡಿದ್ದ ರೂ 5,80,000 ವಶಪಡಿಸಿಕೊಂಡಿರುತ್ತಾರೆ.

8. ಚಿಕ್ಕೋಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 216/2021 ನೇದ್ದರ ಕಳ್ಳತನ ಮಾಡಿದ ಪ್ರಕರಣದಲ್ಲಿ ದಿನಾಂಕ:16.10.2021 ರಂದು ಬೆಳಗಾವಿ ನಗರದ ಖಡೇಬಜಾರದಲ್ಲಿ 03 ಜನ ಆರೋಪಿತರಾದ 1 ಅಶ್ವಿನ್ ಜೈನ್ ಸಾ:ಬೆಳಗಾವಿ ನಗರ 2. ಅಭಿದ ತಂದೆ ಜುಮೇಖಾನ್ ಸಾ: ಕೊಲ್ಲಾಪೂರ 3. ರಿಜವಾನ್ ನೂರುವುದ್ದೀನ್ ಬಿಸಂಬರಾ ಸಾಮಣೆ ರವರನ್ನು ಬಂಧಿಸಿ ಕಳತನ ಮಾಡಿದ್ದ 30,73,291/- ರೂ ಕಿಮ್ಮತ್ತಿನ 1308 ಟಾಯರ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ.

9. ಘಟಪ್ರಭಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:172/2021 ನೇದ್ದರ ಕಳ್ಳತನ ಪ್ರಕರಣದಲ್ಲಿ ದಿನಾಂಕ:28.10.2021 ರಂದು ಮೃತುಂಜಯ ಸರ್ಕಲ್ ಘಟಪ್ರಭಾದಲ್ಲಿ ಮಾಹಾನಿಂಗ ನಾಗಪ್ಪ ಕುರಿ ಸಾ: ಕಲ್ಲೋಳ್ಳಿ ಆರೋಪಿಯನ್ನು ಬಂಧಿಸಿ ಕಳತನ ಮಾಡಿದ್ದ 14 ಮೋಟಾರ ಸೈಕಲ್ ವಶಪಡಿಸಿಕೊಂಡು ಅಕಿ: 4,00,000 ರೂ ಆಗಿರುತ್ತದೆ.

10] ಘಟಪ್ರಭಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:211/2021 ನೇದ್ದರ ಕಳ್ಳತನ ಪ್ರಕರಣದಲ್ಲಿ ODO:9.10.2021 ರಂದು ಪಾಮಲದಿನ್ನಿ ಗ್ರಾಮದಲ್ಲಿ 1 ಸುರೇಶ, ಬಸಪ್ಪ ಗಾಡಿವಡ್ಡರ ಸಾ: ಪಾಮಲದಿನ್ನಿ ಹಾಗೂ 2, ಅವದಿಕರ್ ಪರಶುರಾಮ್ ಗಾಡಿವಡ್ಡರ ಸಾ: ಪಾಮಲದಿನ್ನಿ ಇಬ್ಬರನ್ನು ದಸ್ತಗೀರ ಮಾಡಿ ಕಳತನ ಮಾಡಿದ್ದ 11 ಮೋಟಾರ ಸೈಕಲ್ ವಶಪಡಿಸಿಕೊಂಡಿದ್ದು ಅಕಿ; 3,50,000 ರೂ ಆಗಿರುತ್ತದೆ.

ಬೆಳಗಾವಿ ಜಿಲ್ಲೆಯಲ್ಲಿ ಸನ್ 2020 ಹಾಗೂ 2021 ರ ಇಲ್ಲಿಯವರೆಗೆ ಒಟ್ಟು 206 ಪ್ರಕರಣಗಳಲ್ಲಿ 8,58,23,999/- do ಸಂಬಂಧಪಟ್ಟ ಬೆಲೆ ಬಾಳುವ ವಸ್ತುಗಳನ್ನು ಯಶಸ್ವಿಯಾಗಿ ಪತ್ತೆ ಮಾಡಿ ವಶಪಡಿಸಿಕೊಂಡು ನ್ಯಾಯಾಲಯಗಳ ಅನುಮತಿ ಪಡೆದು 05:08.11.2021 ರಂದು ಪಿರ್ಯಾದುದಾರರಿಗೆ/ ನೊಂದವರಿಗೆ ಹಿಂದಿರುಗಿಸಲಾಗುವುದು. ಉಳಿದ ಪಿರ್ಯಾದುದಾರರಿಗೆ/ ನೊಂದವರಿಗೆ ಸಂಬಂಧಪಟ್ಟ ಠಾಣಾಧಿಕಾರಿಯವರು ಹಿಂದಿರುಗಿಸುವ ಕ್ರಮವನ್ನು ಕೈಗೊಳ್ಳಲಾಗಿದೆ.

ಈ ಬಗ್ಗೆ   ಲಕ್ಷ್ಮಣ ನಿಂಬರಗಿ, ಪೊಲೀಸ್ ಅಧೀಕ್ಷಕರು ಬೆಳಗಾವಿ ರವರು ಪ್ರಕರಣಗಳನ್ನು ಪತ್ತೆ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿ ಜನರಿಗೆ ಶ್ಲಾಘಿಸಿ, ಪ್ರಶಂಸೆಯನ್ನು ವ್ಯಕ್ತ ಪಡಿಸಿರುತ್ತಾರೆ.

ಸಮಗ್ರ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –  Property return parade

ವಿಚಾರಣೆಗೆ ಹಾಜರಾಗದ ಅಧಿಕಾರಿಗಳನ್ನು ಬಂಧಿಸಿ ಕರೆತನ್ನಿ; ಹೈಕೋರ್ಟ್ ಖಡಕ್ ಸೂಚನೆ

Related Articles

Back to top button