Latest

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಐವರ ಪೈಕಿ ನಾಲ್ವರು ಸಾವು

ಪ್ರಗತಿವಾಹಿನಿ ಸುದ್ದಿ; ಕೋಲಾರ: ಮಗು ಅಪಹರಣ ಕೇಸ್ ಗೆ ಸಂಬಂಧಿಸಿದಂತೆ ಹೆದರಿ ವಿಷಸೇವಿಸಿದ್ದ ಐವರ ಪೈಕಿ ನಾಲ್ವರು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಗೋತ್ರಿ (17), ಬಾಬು (45), ನಾರಾಯಣಮ್ಮ (60) ಹಾಗೂ ಮುನಿಯಪ್ಪ (65) ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಪುಷ್ಪಾ ಎಂಬುವವರಿಗೆ ಚಿಕಿತ್ಸೆ ಮುಂದುವರೆದಿದೆ.

Home add -Advt

ಕೋಲಾರದ ಕಾರಂಜಿಕಟ್ಟೆ ಬಡಾವಣೆ ನಿವಾಸಿಗಳಾಗಿದ್ದ ಒಂದೇ ಕುಟುಂಬದ ಐವರೂ ಮಗು ಅಪಹರಣ ಪ್ರಕರಣಕ್ಕೆ ಹೆದರಿ ನಿನ್ನೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ವಿಚಾರಣೆಗೆ ಹಾಜರಾಗದ ಅಧಿಕಾರಿಗಳನ್ನು ಬಂಧಿಸಿ ಕರೆತನ್ನಿ; ಹೈಕೋರ್ಟ್ ಖಡಕ್ ಸೂಚನೆ

Related Articles

Back to top button