Karnataka NewsLife StyleNational

*ಗಣೇಶ ಹಬ್ಬಕ್ಕೆ ಭರ್ಜರಿ ತಯಾರಿ: ಚಿನ್ನದ ಬೆಲೆ ಎಷ್ಟಿದೆ..?* 

ಪ್ರಗತಿವಾಹಿನಿ ಸುದ್ದಿ: ಜನ ಗಣೇಶ ಹಬ್ಬದ ತಯಾರಿಯಲ್ಲಿದ್ದಾರೆ. ಗಣೇಶ ಹಬ್ಬಕ್ಕಾಗಿಯೇ ಆಭರಣಗಳ ಖರೀದಿ ಕೂಡ ಜೋರಾಗಿ ನಡೆಯಲಿದೆ. ಹಾಗಾದರೆ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಎಂದು ತಿಳಿಯೋಣ ಬನ್ನಿ..

ದೇಶದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳು ಕಂಡುಬಂದಿದೆ. ಭಾರತದಲ್ಲಿಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 67,080 ರೂಪಾಯಿ ಇದೆ. ಕಳೆದ ದಿನ ಈ ಬೆಲೆ 67,090 ಇತ್ತು. ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 73,170 ರೂಪಾಯಿ ಇದ್ದರೆ ನಿನ್ನೆ 24ಕ್ಯಾರೆಟ್ ಚಿನ್ನದ ಬೆಲೆ 73,180 ರೂಪಾಯಿ ಇತ್ತು. 10 ಗ್ರಾಂಗೆ ಬೆಳ್ಳಿ ಬೆಲೆ 885 ರೂಪಾಯಿ ಇದೆ.‌

ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 10 ಗ್ರಾಂಗೆ 66,940 ರೂಪಾಯಿ ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂಗೆ 73,030 ರೂಪಾಯಿ ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 8400 ರೂಪಾಯಿ ಇದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button