
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಗತ್ತಿನ 50 ಶ್ರೇಷ್ಠ ಪ್ರವಾಸೋದ್ಯಮ ತಾಣಗಳ 2022ರ ಪಟ್ಟಿಯಲ್ಲಿ ಭಾರತದ ಎರಡು ಪ್ರವಾಸಿ ತಾಣಗಳು ಸೇರ್ಪಡೆಯಾಗಿವೆ.
ಟೈಂ ನಿಯತಕಾಲಿಕ ಈ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕೇರಳ ರಾಜ್ಯ ಹಾಗೂ ಅಹಮದಾಬಾದ್ ಇವೆರಡೂ ಅಸಾಮಾನ್ಯ ಪ್ರವಾಸಿ ತಾಣಗಳೆಂದು ನಿರ್ಧರಿಸಲ್ಪಟ್ಟಿವೆ.
ಪರಿಸರ ಪ್ರವಾಸೋದ್ಯಮದ ಹಾಟ್ ಸ್ಪಾಟ್ ಎಂದೇ ಗುರುತಿಸಲಾಗಿರುವ ಕೇರಳವನ್ನು ಭಾರತದ ಅತ್ಯಂತ ಸುಂದರವಾದ ರಾಜ್ಯ ಎಂದು ಬಣ್ಣಿಸಲಾಗಿದೆ. ಅಂತೆಯೇ ಭಾರತದ ಪ್ರಥಮ ಯುನೆಸ್ಕೋ ಜಾಗತಿಕ ಪಾರಂಪರಿಕ ನಗರ ಖ್ಯಾತಿಯ ಅಹಮದಾಬಾದ್ ‘ಸಾಂಸ್ಕೃತಿಕ ಪ್ರವಾಸೋದ್ಯಮದ ಮೆಕ್ಕಾ’ ಎಂದು ಟೈಂ ವರ್ಣಿಸಿದೆ. ಇದು ಅಧ್ಯಯನಕ್ಕೂ ಅತ್ಯಂತ ಪೂರಕವಾಗಿರುವ ನಗರವೆಂದು ಹೇಳಲಾಗಿದೆ.
ಇದರೊಂದಿಗೆ ಸ್ಕಾಟ್ ಲ್ಯಾಂಡ್ ರಾಜಧಾನಿ ಎಡಿನ್ ಬರ್ಗ್ ಜಗತ್ತಿನ ಅತ್ಯಂತ ಸುಂದರ ನಗರವೆಂದು ಪರಿಗಣಿಸಿದ್ದು ಚಿಕಾಗೋ, ಮೆಡಿಲ್ಲಿನ್, ಗ್ಲಾಸ್ಗೋವ್, ಆಮಸ್ಟರ್ ಡ್ಯಾಂ, ಪರುಗ್ವೇ ಮರಾಕೆಚ್, ಬರ್ಲಿನ್ ಮೊಂಟೇರಿಯಲ್ ಕೋಪನ್ ಹೇಗನ್ ಟಾಪ್ ಟೆನ್ ಪಟ್ಟಿಯಲ್ಲಿವೆ. ಭಾರತದ ಮುಂಬೈ ಮಹಾನಗರ 14ನೇ ಸ್ಥಾನದಲ್ಲಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ- ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ; ಕುತೂಹಲ ಮೂಡಿಸಿದ ಚರ್ಚೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ