Kannada NewsLatestNationalPoliticsTravel

*ಹಸಿರು ಹೈಡ್ರೋಜನ್ ಚಾಲಿತ ಮಿರೈ ಕಾರಿನಲ್ಲಿ ಜೋಶಿ-ಗಡ್ಕರಿ ಪ್ರಯಾಣ*

ಮಿರೈ ಕಾರಿನ ವಿಶೇಷತೆಯೇನು?

ಪ್ರಗತಿವಾಹಿನಿ ಸುದ್ದಿ: ಹಸಿರು ಹೈಡ್ರೋಜನ್ ಮತ್ತು ಶುದ್ಧ ಇಂಧನ ಉತ್ತೇಜಿಸುವ ಸರ್ಕಾರದ ಬದ್ಧತೆಗೆ ಪ್ರತೀಕ ಎಂಬಂತೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಟೊಯೋಟಾ ಮಿರಾಯ್ ಇಂಧನ ಕೋಶ ವಿದ್ಯುತ್ ವಾಹನ (ಎಫ್‌ಸಿಇವಿ)ದಲ್ಲಿ ಪ್ರಯಾಣಿಸಿ ಗಮನ ಸೆಳೆದರು.

Home add -Advt

ಸಚಿವ ಪ್ರಲ್ಹಾದ ಜೋಶಿ ಅವರು ದೆಹಲಿಯ ಭಾರತ್ ಮಂಟಪದಿಂದ ನಿತಿನ್ ಗಡ್ಕರಿ ಅವರ ನಿವಾಸಕ್ಕೆ ಮಿರೈ ಹಸಿರು ಇಂಧನ ಚಾಲಿತ ಕಾರನ್ನು ಸ್ವತಃ ಚಾಲನೆ ಮಾಡಿದರು.

ಟೊಯೋಟಾ ಮಿರೈ ವಿಶೇಷತೆ:

ಎರಡನೇ ತಲೆಮಾರಿನ ಹೈಡ್ರೋಜನ್ ಇಂಧನ ಕೋಶ ವಿದ್ಯುತ್ ವಾಹನ (FCEV)ವಾದ ಟೊಯೋಟಾ ‘ಮಿರೈ’, ಹೈಡ್ರೋಜನ್ ಮತ್ತು ಆಮ್ಲಜನಕದ ನಡುವಿನ ರಾಸಾಯನಿಕ ಕ್ರಿಯೆ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ. ಉಪ-ಉತ್ಪನ್ನವಾಗಿ ನೀರಿನ ಆವಿಯನ್ನು ಮಾತ್ರ ಹೊರಸೂಸುತ್ತದೆ. ಸರಿಸುಮಾರು 650 ಕಿ.ಮೀ. ಚಾಲನಾ ವ್ಯಾಪ್ತಿ ಮತ್ತು ಐದು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಇಂಧನ ತುಂಬುವ ಸಮರ್ಥಗದ್ದಾಗಿದೆ. ಇದು ವಿಶ್ವದ ಅತ್ಯಂತ ಮುಂದುವರಿದ ಮತ್ತು ಪರಿಣಾಮಕಾರಿ ಶೂನ್ಯ-ಹೊರಸೂಸುವಿಕೆ ವಾಹನಗಳಲ್ಲಿ ಒಂದಾಗಿದೆ.

Related Articles

Back to top button