Latest

ಅಪ್ರಾಪ್ತ ಬಾಲಕಿ ವಿವಾಹಕ್ಕೆ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ ಭೂಪ; ವರ ಮಹಾಶಯ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಲು ವರ ಮಹಾಶಯನೊಬ್ಬ ಆಧಾರ್ ಕಾರ್ಡ್ ನ್ನೇ ನಕಲು ಮಾಡಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಮದುಮಗ ಮನು ಎಂದು ಗುರುತಿಸಲಾಗಿದೆ. ಕಾನೂನು ಪ್ರಕಾರ ಯುವತಿಗೆ ವಿವಾಹವಾಗಲು 18 ವರ್ಷ ಆಗಿರಬೇಕು. ಆದರೆ ಮನು ಎಂಬ ಯುವಕ ಅಪ್ರಾಪ್ತ ಯುವತಿ ವಿವಾಹವಾಗಲೆಂದು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾನೆ.

ಯುವತಿಯ ಆಧಾರ್ ಕಾರ್ಡ್ ನಲ್ಲಿ ಆಕೆ ಹುಟ್ಟಿದ ದಿನಾಂಕ, ವರ್ಷವನ್ನೇ ಬದಲಿಸಿದ್ದಾನೆ. ಬಳಿಕ ಯುವತಿಯೊಂದಿಗೆ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ವಿವಾಹವಾಗಲು ನೋಂದಣಿಗಾಗಿ ದಾಖಲೆ ನೀಡಿದ್ದಾನೆ.  ಈ ವೇಳೆ ಆಧಾರ್ ಕಾರ್ಡ್ ನಲ್ಲಿ ಇಸವಿ ತಿದ್ದುಪಡಿ ಮಾಡಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ದೂರು ನೀಡಲಾಗಿದೆ.

ತನಿಖೆ ನಡೆಸಿದ ಪೊಲೀಸರುಗೆ ಯುವಕ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿದ್ದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ರಾಜಗೋಪಾಲನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Home add -Advt

Related Articles

Back to top button