Latest

ಎನ್ ಟಿಪಿಸಿ ಲಿಮಿಟೆಡ್ ಡಿಜಿಎಂ ಶವವಾಗಿ ಪತ್ತೆ; ಸರ್ಕಾರಿ ಅಧಿಕಾರಿ ನಿಗೂಢ ಸಾವಿಗೆ ಕಾರಣವೇನು?

ಪ್ರಗತಿವಾಹಿನಿ ಸುದ್ದಿ; ದಾದ್ರಿ: ಎನ್ ಟಿಪಿಸಿ ಲಿಮಿಟೆಡ್ ನ ಡೆಪ್ಯುಟಿ ಜನರಲ್ ಮ್ಯಾನೇಜರ್ ತಮ್ಮ ಕಚೇರಿ ಆವರಣದಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದಿದೆ.

ಡಿಜಿಎಂ ಸತೀಶ್ ಕುಮಾರ್ ಸಿಂಗ್ ಅವರ ಶವ ಕಚೇರಿ ಆವರಣದಲ್ಲಿ ಪತ್ತೆಯಾಗಿದ್ದು, ಕಚೇರಿ ಆವರಣದಲ್ಲಿಯೇ ಇರುವ ಕೂಲಿಂಗ್ ಪ್ಲಾಂಟ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Home add -Advt

ಇತ್ತೀಚೆಗೆ ಸತೀಶ್ ಕುಮಾರ್ ಸಿಂಗ್ ತಮಗೆ ಕೆಲಸ ಮಾಡಲು ಆಗುತ್ತಿಲ್ಲ. ತುಂಬಾ ಒತ್ತಡವೆನಿಸುತ್ತಿದೆ ಎಂದು ಪತ್ನಿಯ ಬಳಿ ಹೇಳಿಕೊಂಡಿದ್ದರು. ಈ ಬಗ್ಗೆ ಅವರ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸತೀಶ್ ಕುಮಾರ್ ಸಿಂಗ್ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.

ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಅಧಿಕಾರಿ ಸತೀಶ್ ಕುಮಾರ್ ಕಚೇರಿಗೆ ಬಂದಿರಲಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದಾಗ ಕಚೇರಿ ಆವರಣದಲ್ಲಿಯೇ ಇರುವ ಕೂಲಿಂಗ್ ಪ್ಲಾಂಟ್ ನಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿ ಸಾವಿನ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕುತೂಹಲ ಮೂಡಿಸಿದ ಕಿಚ್ಚ ಸುದೀಪ್-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ

Related Articles

Back to top button