*ಬೆಳಗಾವಿಯಲ್ಲಿ GST 2.0 ಕಡಿತದ ಬಗ್ಗೆ ಮಾಹಿತಿ ಕಾರ್ಯಾಗಾರ*

ಪ್ರಗತಿವಾಹಿನಿ ಸುದ್ದಿ: ಇಂದು ದಿನಾಂಕ 27 ಸೆಪ್ಟೆಂಬರ್ 25ರಂದು ಬೆಳಗಾವಿ GST 2.0 ಅಭಿಯಾನದ ತಂಡದಿಂದ ಬೆಳಗಾವಿಯಲ್ಲಿ GST 2.0 ಕಡಿತದ ಬಗ್ಗೆ ಜನರಿಗೆ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಗಾರದಲ್ಲಿ ಬೆಳಗಾವಿ ಬಿಜೆಪಿ ಮಹಾನಗರದ ಅಧ್ಯಕ್ಷರಾದ ಗೀತಾ ಸುತಾರ್ ರವರು, ಹಿರಿಯ ಮುತ್ಸದಿಗಳಾದ ಎಂ ಬಿ. ಜಿರಲಿ ರವರು ರಾಜ್ಯ ವಕ್ತಾರರು, ಹಾಗೂ ಮಾಜಿ ಶಾಸಕರಾದ ಸಂಜಯ್ ಪಾಟೀಲ್ ರವರು ಹಾಗೂ ಬೆಳಗಾವಿ ಮಹಾನಗರಸಭೆಯ ಉಪಮೇಯರಾದ ವಾಣಿ ಜೋಶಿ ರವರು ಡಾ. ರವಿ ಪಾಟೀಲ್ ರವರು ಹಾಗೂ ನಗರ ಸೇವಕರಾದ ಹನುಮಂತ್ ಕೊಂಗಾಲಿ ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದು, ಕಾರ್ಯಕ್ರಮವನ್ನು ಜ್ಯೋತಿ ಶೆಟ್ಟಿ ಸಂಚಾಲಕರು ಜಿಲ್ಲಾ GST 2.0. ಇವರು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಬೆಳಗಾವಿ ನಗರದ ಪ್ರಬುದ್ಧರುಗಳಾದ ಇಂಜಿನಿಯರ್ಸಗಳು, ವೈದ್ಯರುಗಳು, ವಕೀಲರುಗಳು,ಚೇಮರ ಕಾಮರ್ಸ್ ಸದಸ್ಯರುಗಳು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದು. ಕಾರ್ಯಕ್ರಮದಲ್ಲಿ GST ಕಡಿತದ ಕುರಿತು ಹಾಗೂ ಕೇಂದ್ರ ಸರ್ಕಾರದ ಮಹತ್ವದ ಕಾರ್ಯಗಳನ್ನು ಕುರಿತು ಅತಿಥಿಗಳಿಂದ ಮಾಹಿತಿ ನೀಡಲಾಯಿತು. ಕಾರ್ಯಕ್ರಮವು ಇಂಜಿನಿಯರ್ಸ್ ಅಕಾಡೆಮಿಕ್ ಹಾಲಿನಲ್ಲಿ ನಡೆಸಲಾಗೆದ್ದು,ಕಾರ್ಯಕ್ರಮದಲ್ಲಿ ಸುಮಾರು 150 ಜನ ಭಾಗವಹಿಸಿದ್ದರು.