GIT add 2024-1
Beereshwara 33

ಚುನಾವಣೆ ಬಳಿಕ ಗ್ಯಾರಂಟಿಗಳು ನಿಲ್ಲಲಿವೆ: ಡಾ.ಪ್ರಭಾಕರ್ ಕೋರೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೋದಿಯವರು ಪ್ರತಿ ಹೆಣ್ಣು ಮಕ್ಕಳಿಗೆ ಗ್ಯಾಸ್ ನೀಡುವ ಕೆಲಸ ಮಾಡಿದ್ದಾರೆ. ಈಗ ಮಹಿಳೆಯರ ಹೆಸರಿನ ಮೇಲೆ ಮನೆ ಕಟ್ಟಿಸಿಕೂಡುವ ವ್ಯವಸ್ಥೆ ಮಾಡಲಿದ್ದಾರೆ. ಮಹಿಳೆಯರಿಗೆ ಶೇ.33ರಷ್ಟು ರಾಜಕೀಯವಾಗಿ 33% ಮೀಸಲಾತಿ ನೀಡಲಿದ್ದಾರೆ. ಮುಂದಿನ ಐದು ವರ್ಷದಲ್ಲಿ ಪಿಓಕೆ ನಮ್ಮ ವಶವಾಗಲಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹೇಳಿದರು.‌

ಬೆಳಗಾವಿಯ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಉತ್ತರ ಮತ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೊದಲನೆ ಸಲ ಬೇಟಿ ಬಚಾವ್ ಬೇಟಿ ಪಾಡಾವೋ ಎಂಬ ಯೋಜನಡಿ ಭಾಗ್ಯಲಕ್ಷ್ಮಿ ಯೋಜನೆ ರಾಜ್ಯದಲ್ಲಿ ಯಡಿಯೂರಪ್ಪ ಜಾರಿಗೆ ತಂದರು, ಆದರೆ ಈಗನ ಸರ್ಕಾರ ಆ ಯೋಜನೆ ರದ್ದು ಮಾಡಿದೆ. ‌ಬಾಲ ಸಂಜೀವಿನಿ ಯೋಜನೆ ರದ್ದು ಮಾಡಿದ್ದಾರೆ. ಈಗಿನ ಸರ್ಕಾರದ ಹತ್ತಿರ ದುಡ್ಡೆ ಇಲ್ಲ. ಅವರ ಗ್ಯಾರಂಟಿ ಸಲುವಾಗಿ ಎಲ್ಲಾ ಯೋಜನೆಗಳು ಸ್ಥಗಿತಗೊಂಡಿದೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಅವರ ಗ್ಯಾರಂಟಿಗಳು ನಿಲ್ಲಲಿದೆ. ಅವರ ಗ್ಯಾರಂಟಿಗೆ ಮರಳಾಗಬೇಡಿ ಎಂದರು.

ಈ ವೇಳೆ ಬಿಜೆಪಿ ರಾಜ್ಯ ಉಪಾದ್ಯಕ್ಷ ಅನಿಲ ಬೆನಕೆ, ಮಾಜಿ ಸಿಎಂ ಜಗದೀಶ ಶೆಟ್ಟರ್, ಸಂಸದೆ ಮಂಗಳ ಅಂಗಡಿ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಪಾಲಿಕೆ ಮೇಯರ್ ಸವಿತಾ ಕಾಂಬಳೆ, ವಿಧಾನ ಪರಿಷತ್ ಸದಸ್ಯ ಹನಂತ ನಿರಾಣಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ್, ಡಾ. ರವಿ ಪಾಟೀಲ್, ಡಾ ವಿಐ ಪಾಟೀಲ್, ಎಂ ಬಿ ಜಿರಲಿ, ರಮೇಶ ದೇಶಪಾಂಡೆ, ರಾಜೇಂದ್ರ ಹರಕುಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Emergency Service

Laxmi Tai add
Bottom Add3
Bottom Ad 2