Belagavi NewsBelgaum NewsLatest

*ಗುಡ್ಡಾಪುರದಲ್ಲಿ ಕರ್ನಾಟಕ ಯಾತ್ರಿ ನಿವಾಸ ಉದ್ಘಾಟನೆ*

ಏಕಕಾಲಕ್ಕೆ 1000 ಜನ ಕುಳಿತುಕೊಳ್ಳುವ ದಾಸೋಹ ವ್ಯವಸ್ಥೆ; ಶಾಸಕಿ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ: ಜತ ತಾಲೂಕಿನ  ಇತಿಹಾಸ ಪ್ರಸಿದ್ಧ ಗುಡ್ಡಾಪುರದ ಶ್ರೀ ದಾನಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಶಶಿಕಲಾ ಜೊಲ್ಲೆ ಮುಜರಾಯಿ ಸಚಿವೆಯಾದ ಸಂದರ್ಭದಲ್ಲಿ ಬಿಡುಗಡೆಯಾದ 10 ಕೋಟಿ 96 ಲಕ್ಷ ರೂ ಮೊತ್ತದಲ್ಲಿ ನಿರ್ಮಾಣವಾದ ನೂತನ ಕರ್ನಾಟಕ ಯಾತ್ರಿ ನಿವಾಸವನ್ನೂ ಮುಗಳಖೋಡ ಜಿಡಗಾ ಮಠದ ಪ.ಪೂ.ಶ್ರೀ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ, ಚಿಕ್ಕಮಗಳೂರು ಗೌರಿಗದ್ದೆಯ ಶ್ರೀ ವಿನಯ ಗುರೂಜಿ, ಬಬಲೇಶ್ವರ ಬ್ರಹ್ಮಣಮಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಗುಡ್ಡಾಪುರದ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆಯವರು ಉದ್ಘಾಟಿಸಿದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ  ಈ ಸಮಾರಂಭಕ್ಕೆ ಮುಜರಾಯಿ ಸಚಿವರು ಆಗಮಿಸಬೇಕಿತ್ತು, ಕೆಲವು ಕಾರಣಾಂತರಗಳಿಂದ ಸಚಿವರು ಆಗಮಿಸದ ಹಿನ್ನೆಲೆಯಲ್ಲಿ ಪೂಜ್ಯರ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕ ಭವನದಲ್ಲಿ ಏಕಕಾಲಕ್ಕೆ ಒಂದು ಸಾವಿರ ಜನ ಕುಳಿತುಕೊಳ್ಳುವ ದಾಸೋಹ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಉತ್ತರ ಕರ್ನಾಟಕದ ಹೆಚ್ಚಿನ ತಾಯಂದಿರು ಪಾದಯಾತ್ರೆ ಮೂಲಕ ಆಗಮಿಸುವ ಹಿನ್ನೆಲೆಯಲ್ಲಿ ಯಾತ್ರಿ ನಿವಾಸದ ವ್ಯವಸ್ಥೆ ಕಲ್ಪಿಸಿದ್ದು, ಯಾತ್ರಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ನಮ್ಮ ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಬೇರೆ ರಾಜ್ಯಗಳಲ್ಲಿರುವ ಪ್ರಮುಖ ಯಾತ್ರಾ ಸ್ಥಳಗಳಾದ ಪಂಢರಪುರ, ತುಳಜಾಪುರ, ಮಂತ್ರಾಲಯ, ಶಬರಿಮಲೆಯಲ್ಲಿ ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಾಣಕ್ಕೆ ನಾನು ಮುಜರಾಯಿ ಇಲಾಖೆ ಸಚಿವೆಯಾಗಿದ್ದಾಗ ಅನುದಾನ ನೀಡಿದ್ದು,ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲಿ ಅವುಗಳನ್ನು ಉದ್ಘಾಟಿಸಲಾಗುವುದು. ಸುಮಾರು 900 ವರ್ಷಗಳಿಂದ ನಿತ್ಯವೂ ತ್ರಿಕಾಲ ಪೂಜೆಗೊಳ್ಳುತ್ತಿರುವ ಶರಣೆ, ಭಕ್ತರ ಪಾಲಿನ ಭಾಗ್ಯದಾತೆ ದಾನಮ್ಮ.ಜನರ ಒಳಿತಿಗಾಗಿ ದಾನ,ಧರ್ಮ ಮಾಡುತ್ತಿದ್ದ ದಾನಮ್ಮ ಬಸವಣ್ಣನವರ ಸಮಕಾಲೀನವರು. ಶ್ರೀ ದಾನಮ್ಮ ಮಾತೆ ಭಕ್ತರ ಸಕಲ ಕೋರಿಕೆಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆಯಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ  ವಿಲಾಸರಾವ ಜಗತಾಪ, ದೇವಸ್ಥಾನ ಕಮೀಟಿ ಅಧ್ಯಕ್ಷರಾದ  ವಿಜುಗೌಡ ಪಾಟೀಲ, ಉಪಾಧ್ಯಕ್ಷರಾದ  ಚಂದ್ರಶೇಖರ ಗೊಬ್ಬಿ, ಕಮೀಟಿ ಸದಸ್ಯರು, ಸ್ಥಳೀಯ ಮುಖಂಡರು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button