Kannada NewsLatest

ಗೂಗವಾಡ ಅಪಘಾತ ಪ್ರಕರಣ; ಗೆಳೆಯನನ್ನೇ ಕೊಲೆಗೈದು ಆಕ್ಸಿಡೆಂಟ್ ಕಥೆ ಕಟ್ಟಿದ್ದ ಆರೋಪಿಗಳು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲಾ ನೂತನ ಎಸ್ ಪಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಅಥಣಿ ಪೋಲಿಸ್ ಠಾಣೆಗೆ ಎಸ್ ಪಿ. ಸಂಜೀವ್ ಪಾಟೀಲ ಭೇಟಿ ನೀಡಿ ತಾಲೂಕಿನ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ಪಡೆದರು.

ಠಾಣೆಯಲ್ಲಿಯ ಸಿಬ್ಬಂದಿಗಳ ಕೊರತೆ ಮತ್ತು ಅವರ ಕೆಲಸದ ಒತ್ತಡ ನಡುವೆಯೂ ಅವರುಗಳ ಕುಂದು ಕೊರತೆಗಳ ವಿಚಾರಸಿದರಲ್ಲದೆ ತಾಲೂಕಿಗೆ ಅಂಟಿಕೊಂಡಿರುವ ಮಹಾರಾಷ್ಟ್ರದ ಪೋಲಿಸ್ ಇಲಾಖೆಯ ಸಹಕಾರದ ಕುರಿತು ಸಮಗ್ರ ಮಾಹಿತಿ ಪಡೆದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಥಣಿ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ ತಿಂಗಳಲ್ಲಿ ನಡೆದ ಗಡಿಭಾಗದ ಜತ್ತ ತಾಲೂಕಿನ ಗೂಗವಾಡ ಗ್ರಾಮದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಭದಿಸಿದಂತೆ ಈ ಪ್ರಕರಣ ಅತೀ ಜಟಿಲವಾಗಿತ್ತು ಕೊಲೆಮಾಡಿದ ಆರೋಪಿಗಳು ಅವನ ಗೆಳೆಯರೆ ಆಗಿದ್ದು ಇಬ್ಬರ ಗೆಳೆಯರ ನಡುವಿನ ಅನೈತಿಕ ಸಂಬಂಧವೆ ಕಾರಣವಾಗಿತ್ತು ಮೂವರು ಸೇರಿ ಕೊಲೆಗೈದು ಅದನ್ನು ಅಪಘಾತ ಎಂದು ಬಿಂಬಿಸಿದ್ದರು. ಇದು ಬಹುತೇಕವಾಗಿ ಕೊಲೆ ಅಂದುಕೊಂಡ ಅಥಣಿ ಪೋಲಿಸರು ಸಿಪಿಐ ಶಂಕರಗೌಡರ ನೇತೃತ್ವದಲ್ಲಿ ತಂಡ ರಚಿಸಿ ಹಗಲು ರಾತ್ರಿ ಎನ್ನದೇ ಪ್ರಯತ್ನದ ಫಲವೇ ಈ ಪ್ರಕರಣ ಭೇದಿಸಿ ಯಶಸ್ಸು ಕಾಳಲು ಸಾದ್ಯವಾಗಿದ್ದು ಈ ಎಲ್ಲ ತಂಡದ ಸಿಬ್ಬಂದಿಗೆ ಬೆಳಗಾವಿ ಪೋಲಿಸ್ ಇಲಾಖೆವತಿಯಿಂದ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ತಿಳಸಿದರು.

ಅಥಣಿಯು ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು ನಾವು ಕೂಡ ಇಲ್ಲಿ ಒಂದು ರಸ್ತೆ ನಿಯಂತ್ರಣ ಠಾಣೆ ಮತ್ತು ತಾತ್ಕಾಲಿಕವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸುವ ಕುರಿತು ಮೇಲಾಧಿಕರಿಗಳ ಗಮನಕ್ಕೆ ತರಲಾಗುವುದು. ಸರಕಾರದ ಆದೇಶದಂತೆ ಇಲಾಖೆ ಜನಸ್ನೇಹಿ ಪೊಲೀಸ್ ಇಲಾಖೆ ಆಗಿ ನಮ್ಮಗಳ ಮೀತಿಯಲ್ಲಿ ಎಲ್ಲರೂ ಕಾರ್ಯಮಾಡುತಿದ್ದಾರೆ ಅದರೂ ಅಪರಾಧಿಗಳನ್ನು ಹಿಡಿಯುವಲ್ಲಿ ಜನರ ಸಹಕಾರವು ಅತೀ ಮುಖ್ಯವೆಂದರು.

ಅಥಣಿ ಪಿಎಸ್ಐ ಕುಮಾರ್ ಹಾಡಕರ್ ಮತ್ತು ಸಿಬ್ಬಂದಿಗಳಿಂದ ಗೌರವ ಸಮರ್ಪಣೆ ಪಡೆದರು. ಪ್ರತಿ ಸಿಬ್ಬಂದಿಯ ಕರ್ತವ್ಯ ಕುರಿತು ಅವರುಗಳಿಂದಲೇ ಮಾಹಿತಿ ಪಡೆದರು. ಅಥಣಿ ಡಿಎಸಪಿ ಗೀರಿಶ ಇವರ ಮಾರ್ಗದರ್ಶನದಲ್ಲಿ ಸಿಪಿಆಯ್ ಶಂಕರಗೌಡ ಬಸನಗೌಡರ, ಅಥಣಿ ಠಾಣೆಯ ಪಿಎಸ್ಆಯ್ ಕುಮಾರ ಹಾಡಕರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಅಫರಾಧಿ ವಿಭಾಗದಲ್ಲಿ ಕೆಲಸಮಾಡುತ್ತಿರು ಮಹೇಶ ದೊಡ್ಡಮನಿ, ಬಸವರಾಜ ತಳವಾರ,ನಾಯಕ,ಇರಕರ, ರಮೇಶ ಹಾದಿಮನಿ ಇವರುಗಳು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಸಲು ಸೂಚಿಸಿದರು.

ಈ ವೇಳೆ ಎಸ್ಐಗಳಾದ ರಾಮೋಜಿ, ಗುಡಾಜ, ಸೂರ್ಯವಂಶಿ, ಸವದಿ, ಮಲಗೌಡ, ಸುದಾಕರ, ಕುರಿ,ಹೀರೆಮಠ, ಮಾರುತಿ ಮಲವಗೂಳ, ಕಮತೆ, ಕಾಂಬಳೆ ಸೇರಿದಂತೆ ಅನೇಕರು ಇದ್ದರು.

 

ಹುಬ್ಬಳ್ಳಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 9 ಜನರಿಗೆ ಗಂಭೀರ ಗಾಯ

https://pragati.taskdun.com/politics-2/75-km-walk-program-by-75-thousand-people-dk-shivakumar-statement-in-kittur/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button