ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 10 ನೇ ತರಗತಿ ಓದುತ್ತಿರುವ ಮಕ್ಕಳಿಗೆ ಸೋಮವಾರ (ಮಾ.28) ಪರೀಕ್ಷೆ ಆರಂಭ. ಒಂದಿಷ್ಟು ಉಪಯುಕ್ತ ಸಲಹೆಗಳು ಇಲ್ಲಿವೆ –
೧) ಹಾಲ್ಟಿಕೇಟ್ ಚೆಕ್ ಮಾಡಿಕೊಳ್ಳಿ
೨) ೯ ಗಂಟೆಗೆ ಪರೀಕ್ಷಾ ಕೇಂದ್ರ ತಲುಪಿ
೩) ಜಾಮಿಟ್ರಿ ಬಾಕ್ಸ್ ಜೊತೆಗಿರಲಿ
೪) ೨ ಉತ್ತಮ ಪೆನ್ನು ಕೈಯಲ್ಲಿ ಇರಲಿ
೫) ಮಿತವಾಗಿ ಆಹಾರ ಸೇವಿಸಿ
೬) ಭಯ, ಆತಂಕ ಬೇಡ
೭) ಉತ್ತಮ ಕ್ಲಿಪ್ ಬೋರ್ಡ್ ಇರಲಿ
೮) ಕೀ ಪಾಯಿಂಟ್ಸ್ , ಶಾರ್ಟ್ ನೋಟ್ಸ್ ಚೆಕ್ ಮಾಡಿ ಹೊರಗಿಟ್ಟು ಬಿಡಿ
೯) ಲಾಂಗ್ ಸ್ಕೇಲ್, ಪೆನ್ಸಿಲ್ , ಎರೇಜರ್ ,ಮೆಂಡರ್ ಇರಲಿ
೧೦) ಅರ್ಧ ಗಂಟೆ ಮೊದಲು ಓದು ನಿಲ್ಲಿಸಿ
೧೧) ಹಾಳೆ ಇತರೆ ಯಾವುದೇ ಬರವಣಿಗೆ ಪರೀಕ್ಷೆ ಕೊಠಡಿಗೆ ಒಯ್ಯುವುದು ಬೇಡ
೧೨) ಚಿಕ್ಕ ಬಾಟಲ್ ನೀರು ಜೊತೆಗಿರಲಿ
೧೩) ಪರೀಕ್ಷೆ ಹಾಲ್ ನಲ್ಲಿ ರಜಿಸ್ಟರ್ ನಂಬರ್ ಖಾತ್ರಿ ಪಡಿಸಿಕೊಳ್ಳಿ
೧೪) ಕೊಠಡಿಯೊಳಗೆ ಕುಳಿತ ನಂತರ ಐದು ನಿಮಿಷ ರಿಲ್ಯಾಕ್ಸ್ ಆಗಿ
೧೫) ಶಾಂತವಾಗಿರಿ, ಆತಂಕ ದುಗುಡ, ಉದ್ವೇಗ, ಭಯ ಬೇಡ
೧೬) ಉತ್ತರ ಪತ್ರಿಕೆ ಮೇಲೆ ನೊಂದಣಿ ಸಂಖ್ಯೆ & ಇತರೆ ಮಾಹಿತಿ ಭರ್ತಿಮಾಡಿ
೧೭) ರೂಮ್ ಸೂಪರ್ವೈಜರ್ ಗೆ ಮಾಹಿತಿ ಒದಗಿಸಿ
೧೮) ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ , ನಂತರ ತಿಳಿಯದ ಪ್ರಶ್ನೆಗಳ ಉತ್ತರವನ್ನು ಯೋಚಿಸಿ ಉತ್ತರ ಬರೆಯಿರಿ, ಇದರಿಂದ ಸಮಯದ ಉಳಿತಾಯವಾಗುತ್ತದೆ
೧೯) ಪರೀಕ್ಷೆ ನಿಯಮಗಳ ಬಗ್ಗೆ ಅರಿತುಕೊಳ್ಳಿ ಆತಂಕ ಬೇಡ
೨೦)ಸರಳವಾದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ
೨೧) ಅನಗತ್ಯ ಸಮಯ ಹರಣ ಬೇಡ
೨೨) ಶುದ್ದ, ಸ್ಷಷ್ಟ ,ನಿಖರ, ನೇರ ಉತ್ತರ ಬರೆಯಿರಿ
೨೩) ಸಮಯದ ನಿರ್ವಹಣೆಗಾಗಿ ಒಂದು ವಾಚ್ ಕಟ್ಟಿಕೊಳ್ಳಿ
೨೪) ಪ್ರಶ್ನೆ ಸಂಖ್ಯೆ ಸರಿಯಾಗಿ ನಮೂದಿಸಿ ಅನಗತ್ಯ ಪುರವಣಿ ಕಟ್ಟಬೇಡಿ
೨೫) ಉತ್ತರ ಪತ್ರಿಕೆ ಬರೆದ ಮೇಲೆ ಒಮ್ಮೆ ಕೂಲಂಕುಶವಾಗಿ ಕ್ರಮವಾಗಿ ಎಲ್ಲವನ್ನು ಚೆಕ್ ಮಾಡಲೇ ಬೇಕು
೨೬) ಪರೀಕ್ಷಾ ಸಮಯ ಮುಗಿಯುವವರೆಗೂ ಪರೀಕ್ಷಾ ಕೊಠಡಿಯಿಂದ ಹೊರಬರಬೇಡಿ, ಸಮಯ ಮುಗಿದ ನಂತರ ಉತ್ತರ ಪತ್ರಿಕೆಯನ್ನು ವೈಯಕ್ತಿಕವಾಗಿ ಕೊಠಡಿ ಮೇಲ್ವಿಚಾರಕರಿಗೆ ಒಪ್ಪಿಸಿ ಹೊರಬನ್ನಿ
೨೬) ಎಣ್ಣೆ ಪದಾರ್ಥಗಳು ಹಾಗೂ ಹೊರಗಿನ ತಿಂಡಿಗಳನ್ನು ಪರೀಕ್ಷೆ ಮುಗಿಯುವವರೆಗೂ ವರ್ಜಿಸಿ, ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.
೨೭)ಏಕಾಗ್ರತೆಯಿಂದ ಅಧ್ಯಯನ ಕೈಗೊಳ್ಳಿ, ಏಕಾಗ್ರತೆ ಹೆಚ್ಚಿಸಿಕೊಳ್ಳಲು ಮುಂಜಾನೆ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ
೨೮)ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ತಂದೆ ತಾಯಿಯರ ಶುಭಾಶೀರ್ವಾದ ಪಡೆದು ಹೊರಡಿ
೨೯) ಧೈರ್ಯ ಹಾಗೂ ಆತ್ಮವಿಶ್ವಾಸಗಳಿಂದ ಪರೀಕ್ಷೆ ಎದುರಿಸಿ
೩೦)ಪರೀಕ್ಷೆಯನ್ನು ಕ್ರಿಕೆಟ್ ಆಟವೆಂದೋ ಅಥವಾ ಯಾವುದೋ ಹಬ್ಬವೇನೋ ಅಥವಾ ಯಾವುದೋ ಸಿನೇಮಾ ಏನೋ ಎಂಬ ಮನೋಭಾವವನ್ನು ಹೊಂದಿ ಪರೀಕ್ಷೆಯನ್ನು ಸಂಭ್ರಮಿಸಿ
ಯಾವುದೇ ಕಾರಣಕ್ಕೂ ನಿದ್ದೆಗೆಟ್ಟು ಓದಬೇಡಿ
ಇದು ತಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು, ಅದು ಪರೀಕ್ಷೆಗೆ ಮಾರಕವಾಗಿ ಪರಿಣಮಿಸಬಹುದು,
ಹಾಸಿಗೆಯ ಮೇಲೆ ಕುಳಿತು ಅಥವಾ ಮಲಗಿ ಓದಬೇಡಿ, ಅಧ್ಯಯನಕ್ಕೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿಕೊಳ್ಳಿ, ಆ ಜಾಗ ಪ್ರಶಾಂತವಾಗಿರಲಿ.
ಒಂದು ವಿಷಯದ ಪರೀಕ್ಷೆ ಬರೆದ ನಂತರ ಅದರ ಬಗ್ಗೆ ಚರ್ಚೆ ಬೇಡ, ಮುಂದಿನ ಪರೀಕ್ಷೆಯ ವಿಷಯದ ಕಡೆ ಗಮನ ಹರಿಸಿ.
ಈ ಪರೀಕ್ಷೆ ಅಂತಿಮವೇನಲ್ಲ, ಇದು ಜೀವನದ ಒಂದು ತಿರುವು ಮಾತ್ರ, ಮುಂದಿನ ಜೀವನ ದೊಡ್ಡದಿದೆ.
ಹಾಗಾಗಿ ಪೋಷಕರಾಗಲೀ ಶಿಕ್ಷಕರಾಗಲೀ ವಿದ್ಯಾರ್ಥಿಗಳ ಮೇಲೆ ಅಥವಾ ತಮ್ಮ ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡ ಹಾಕಬೇಡಿ, ಆಥವಾ ತಮ್ಮ ಆಸೆ ಆಕಾಂಕ್ಷಸೆಗಳನ್ನು, ನಿರೀಕ್ಷೆಗಳನ್ನು ಹೇರಬೇಡಿ, ಒಂದುವೇಳೆ ಅವುಗಳನ್ನು ಈಡೇರಿಸಲಾಗದಿದ್ದಲ್ಲಿ ಬೇರೆ ರೀತಿಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.ಆದ್ದರಿಂದ ಅವರಿಗೆ ಆತ್ಮತವಿಶ್ವಾಸ ಹಾಗೂ ಧೈರ್ಯದ ಮಾತುಗಳನ್ನಾಡಿ ಕಳುಹಿಸಿ.
ಪರೀಕ್ಷೆ ಎಂಬ ಯುದ್ಧದಲ್ಲಿ,
ಪೆನ್ನು ಎಂಬ ಖಡ್ಗವ ಹಿಡಿದು,
ಶಾಯಿ ಎಂಬ ರಕ್ತ ಚೆಲ್ಲಿ ಜಯಶಾಲಿಗಳಾಗಿ ಬನ್ನಿ ಮಕ್ಕಳೇ,
ಉತ್ತಮ ಯಶಸ್ಸು ಎಂದೆಂದು ನಿಮ್ಮದಾಗಲಿ …
(ಎಲ್ಲ ವಿದ್ಯಾರ್ಥಿಗಳಿಗೂ, ಪಾಲಕರಿಗೂ, ಗ್ರುಪ್ ಗಳಿಗೂ ಶೇರ್ ಮಾಡಿ)
ಪೂರ್ವ ಸಿದ್ಧತಾ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು SSLC ವಿದ್ಯಾರ್ಥಿಗಳಿಗೆ ಸಲಹೆಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ