
ಪ್ರಗತಿವಾಹಿನಿ ಸುದ್ದಿ, ತಿರುಪತಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಆಂಧ್ರ ಪ್ರದೇಶದ ಶ್ರೀಕ್ಷೇತ್ರ ಕಾಳಹಸ್ತಿಗೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಎಚ್ಎಎಲ್ ನಿಂದ ಹೆಲಿಕಾಪ್ಟರ್ ಮೂಲಕ ತಿರುಪತಿಗೆ ತೆರಳಲಿರುವ ಅವರು, ಮಧ್ಯಾಹ್ನ 3ಕ್ಕೆ ತಿರುಪತಿ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಕಾಳಹಸ್ತಿಗೆ ತೆರಳಲಿ ಅಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾನುವಾರ ಕಾಳಹಸ್ತಿಯಲ್ಲೇ ವಸತಿ ಹೂಡಲಿರುವ ಡಿಕೆಶಿ, ನಾಳೆ (ಸೋಮವಾರ) ಮಧ್ಯಾಹ್ನ ತಿರುಪತಿ ಮೂಲಕ ಪುನಃ ಬೆಂಗಳೂರಿಗೆ ಆಗಮಿಸಲಿದ್ದಾರೆ.