Latest

ಬಳ್ಳಾರಿಯಲ್ಲಿ ಮತ್ತೆ ಗುಡುಗಿದ ಜನಾರ್ಧನ ರೆಡ್ಡಿ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಮಾಜಿ ಸಚಿವ ಜನಾರ್ಧನ ರೆಡ್ಡಿ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಯಾವುದೇ ಇರಲಿ ಹುಲಿ ಬೇಟೆಗೆ ನಿಂತರೆ ಬೇಟೆ ಆಡೇ ಆಡುತ್ತೆ ಎಂದು ಗುಡುಗಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ, ರಸ್ತೆಯಲ್ಲಿ ಓರ್ವ ಹುಡುಗ ಹುಲಿ ಫೋಟೋ ತೋರಿಸಿ ನನ್ನನ್ನು ಹುಲಿ ಅಂತಾ ಕರೆದ. ಹುಲಿಗೆ ಹಸಿವಾದಾಗ ಬೇಟೆ ಆಡೇ ಆಡುತ್ತೆ. ರಕ್ತದಲ್ಲಿ ಇರುವುದನ್ನು ಯಾರೂ ಬದಲಿಸಲು ಆಗಲ್ಲ. ಕೆಲವರು ನನ್ನನ್ನು ಮತ್ತೆ ಬಳ್ಳಾರಿಂದ ಹೊರಗೆ ಹಾಕುತ್ತಿದ್ದಾರೆ. 2-3 ತಿಂಗಳಲ್ಲಿ ನಾನು ಮತ್ತೆ ಬಳ್ಳಾರಿಗೆ ಬರುತ್ತೇನೆ. ಕಳೆದ ಒಂದುವರೆ ವರ್ಷದಿಂದ ನಾನು ಬಳ್ಳಾರಿ ಮನೆಯಿಂದ ಹೊರಗೆ ಬಂದಿಲ್ಲ. 12 ವರ್ಷಗಳಿಂದ ನಾನು ಸುಮ್ಮನೆ ಇದ್ದೀನಿ ಅಂದ್ರೆ ನನ್ನ ಕೈಯಲ್ಲಿ ಏನೂ ಆಗಲ್ಲ ಅಂತ ಅಲ್ಲ. ಆಗಬೇಕಿರುವ ಕೆಲಸ ಆಗಲ್ಲ ಅಂತ ಸುಮ್ನಿದ್ದೆ ಎಂದು ಹೇಳಿದ್ದಾರೆ.

ನಮ್ಮ ಕುಟುಂಬ ಬಳ್ಳಾರಿ ಅಭಿವೃದ್ಧಿಗೆ ಬದ್ಧವಾಗಿದೆ. ಬಿಜೆಪಿ, ಕಾಂಗ್ರೆಸ್ ಅಂತಾ ನಾನು ಹೇಳೋದಿಲ್ಲ. ನಮ್ಮ ಕುಟುಂಬದ ಮೇಲೆ ಬಳ್ಳಾರಿ ಜನರ ಆಶಿರ್ವಾದ ಇರಲಿ ಎಂದು ಹೇಳಿದರು. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಜನಾರ್ಧನ ರೆಡ್ಡಿ ಬಳ್ಳಾರಿಯಿಂದ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

KSRTC ಬಸ್ ಗೆ ಮತ್ತೊಬ್ಬ ಬೈಕ್ ಸವಾರ ಬಲಿ

Home add -Advt

https://pragati.taskdun.com/latest/ksrtc-busaccidentbbmp-employee-death/

Related Articles

Back to top button