
ಗುರು ಪೂರ್ಣಿಮಾ ಸಮಾರಂಭ
ಪ್ರಗತಿವಾಹಿನಿ ಸುದ್ದಿ – ಬಿಳಗಾವಿ : ಬೆಳಗಾವಿಯ ಅಮೃತ ವಿದ್ಯಾಲಯಂ ಶಾಲೆಯಲ್ಲಿ ದಿನಾಂಕ 18-7-19ರಂದು ಮನೋಪ್ರಭಾ ಮಂಗಲ ಕಾರ್ಯಾಲಯದಲ್ಲಿ ಗುರುಪೂರ್ಣಿಮೆಯನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಡಿ. ಬಡಿಗೇರ ಅತಿಥಿಯಾಗಿ ಆಗಮಿಸಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಜಗಜಂಪಿ ಅತಿಥಿಗಳಾಗಿ ಆಗಮಿಸಿದ್ದರು. ದ್ವೀಪ ಪ್ರಜ್ವಲಿಸಿ ಸಭೆಯನ್ನುದ್ದೇಶಿಸಿ ಕೆ.ಡಿ. ಬಡಿಗೇರ ಅವರು ಮಕ್ಕಳಿಗೆ ಒಳ್ಳೆಯ ಜ್ಞಾನ ಹಾಗೂ ಸಂಸ್ಕೃತಿಯನ್ನು ಕಲಿಸುವ ಹೊಣೆ ಗುರುವಿನದಾಗಿರುತ್ತದೆ. ಎಂದು ಹೇಳಿದರು “ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು”, ಪಾಲಕರನ್ನು ಗೌರವಿಸುವುದು ಮಕ್ಕಳ ಕರ್ತವ್ಯ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ತಾಯಂದಿರು ಮಕ್ಕಳಿಗೆ ಹಾಲುಣಿಸುವಾಗ ಮೌಲ್ಯಾಧಾರಿತ ಪರೋಪಕಾರಿ ವಿಷಯಗಳನ್ನು ಹೇಳುತ್ತಿದ್ದರು. ಅವರು ಪಾಲಕರಿಗೆ ಮಕ್ಕಳ ಕೈಯಲ್ಲಿ ಮೊಬಾಯಿಲಗಳನ್ನು ಕೊಡಬಾರದೆಂದು ಎಚ್ಚರಿಕೆ ನೀಡಿದರು.
ವಿವಿಧ ತರಗತಿಯ ಮಕ್ಕಳು ಭಾಷಣ, ಹಾಡು, ನೃತ್ಯಗಳೊಂದಿಗೆ ಭಜನೆ ಮತ್ತು ದೃಶ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು. ಪ್ರಾಂಶುಪಾಲರಾದ ಶ್ರೀಮತಿ ಸುಷ್ಮಾ ಚರಂತಿಮಠ ಅವರು ಅಮ್ಮನ ಪಾದುಕಾ ಪೂಜೆಯನ್ನುಮಾಡಿ, ಮಕ್ಕಳಿಗೆ ತಂದೆ ತಾಯಿಯರ ಪಾದ ಪೂಜೆಮಾಡಲು ಮಾರ್ಗದರ್ಶನ ನೀಡಿದರು. ಸಮಾರಂಭವು ಪ್ರಸಾದ ವಿತರಣೆಯೊಂದಿಗೆ ಅತ್ಯಂತ ವಿಜೃಂಬನೆಯಿಂದ ಮುಕ್ತಾಯವಾಯಿತು.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ