Kannada News

ಗುರುಪೂರ್ಣಿಮಾ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ

ಉಷಾತಾಯಿ ಗೋಗಟೆ ಶಾಲೆಯಲ್ಲಿ ಗುರುಪೂರ್ಣಿಮಾ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ.

ಪ್ರಗತಿ ವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ. ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರದಂದು ಆಯೋಜಿಸಿದ್ದ ‘ಗುರು ಪೂರ್ಣಿಮೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ. ಡಿ. ಬಡಿಗೇರ ಹಾಗೂ ಗೌರವ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಡಾ. ರಾಜಶೇಖರ ಚಲಗೇರಿ, ಅಧ್ಯಕ್ಷರಾಗಿ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಸುಧೀರ ಕುಲಕರ್ಣಿ ಉಪಸ್ಥಿತರಿದ್ದರು.

ಗುರುವಿನ ಮಾರ್ಗದರ್ಶನವಿಲ್ಲದೆ ಜೀವನ ಸಾರ್ಥಕವಾಗದು ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ಅಮೂಲ್ಯವಾದ ಸ್ಥಾನವಿದೆ. ಅಜ್ಞಾನದಿಂದ ಸುಜ್ಞಾನ ಮಾಡುವ ಹಾಗೂ ಪ್ರತಿಯೊಬ್ಬರಿಗೆ ಸರಳಮಾರ್ಗ ತೊರುವ ಕಾರ್ಯ ಗುರುಗಳು ಮಾಡುವುದರಿಂದ ವಿದ್ಯಾರ್ಥಿಗಳು ಗುರುವಿನ ಮೇಲೆ ಶ್ರದ್ಧೆಯಿಟ್ಟು ಒಳ್ಳೆಯದನ್ನು ಅನುಕರಣ ಮಾಡಬೇಕೆಂದು ಕೆ. ಡಿ. ಬಡಿಗೇರ ಹೇಳಿದರು.

ಡಾ. ರಾಜಶೇಖರ ಚಲಗೇರಿ ಮಾತನಾಡಿ ವಿದ್ಯಾರ್ಥಿಗಳು ಪ್ರಮಾಣಿಕತೆ, ಸತತ ಪ್ರಯತ್ನ, ನಿಸ್ವಾರ್ಥ ಸೇವೆ, ಪರೊಪಕಾರಿ ಜೀವನ, ಹಿರಿಯರಿಗೆ ಗೌರವಿಸುವ ಗುಣ ಮುಂತಾದ ಒಳ್ಳೆ ಗುಣಗಳನ್ನು ಬೆಳೆಸಿ ವಿಧ್ಯಾಭ್ಯಾಸದ ಜೊತೆಗೆ ಸಹಪಟ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮಲ್ಲಿ ಇರುವ ಕಲೆಗಳನ್ನು ವಿಕಸಿತ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು “ದಾಸ ಸಾಹಿತ್ಯ”ಕ್ಕೆ ಸಂಬಂಧಿಸಿದಂತೆ ಗೀತೆಗಳನ್ನು ಪ್ರಸ್ತುತಪಡಿಸಿದರು. ಗುರುವರ್ಯ ಕುಂಟೆ, ಅಸಾವರಿ ಸಂತ, ಲೀನಾ ಅಷ್ಟೇಕರ, ಮಧುಕರ ನಾಯಿಕ, ಅಭಿಜಿತ ಅಂಕಲೆ, ಗಿರಿಜಾ ಗನಪತಿ ಶಾಲದಾರ್, ವೃಂದಾ ಚಿಕ್ಕೆರುರ ಮತ್ತು ವೃಂದಾ ಹೂಯಿಲಗೊಳ, ಎಸ್. ಎಸ್. ಕುಲಕರ್ಣಿ, ರಾಜೇಂದ್ರ ನಾಯಿಕ ಹಾಗೂ ವಿಜೇಂದ್ರ ನಾಯಿಕ ಹಾಗೂ ಎಸ್. ಕೆ. ಕುಲಕರ್ಣಿ ಮುಂತಾದ ದಾನಿಗಳಿಂದ ನೀಡಲಾದ ವಿದ್ಯಾರ್ಥಿವೇತನವನ್ನು ‘34’ ಬಡ ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು.

Home add -Advt

ಕಾರ್ಯಕ್ರಮವನ್ನು ಉದ್ಘಾಟಿಸಿ, ಕೆ. ಡಿ. ಬಡಿಗೇರ ವ್ಯಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮ ಆರಂಭಿಸಲಾಯಿತು. ಮುಖ್ಯೋಪಾದ್ಯಾಯ ಎಮ. ಕೆ. ಮಾದಾರ ಪ್ರಾಸ್ತಾವಿಕ ಮಾತನಾಡಿ ‘ಗುರು ಪೂರ್ಣಿಮೆ’ಯ ಮಹತ್ವ ತಿಳಿಸಿದರು. ಕಾರ್ಯಕ್ರಮದ ಸಂಚಾಲಿಕಿಯಾದ ಲಕ್ಷ್ಮಿ ಯಳವಟಕರ ಹಾಗೂ ಇನ್ನಿತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೃಷ್ಠಿ ಪಾಖರೆ ನಿರೂಪಿಸಿ, ಇಶ್ವರಿ ಪಾಟೀಲ ವಂದಿಸಿದರು.///

Related Articles

Back to top button