Latest

ಮಾಜಿ ಪ್ರಧಾನಿಗೆ ದುಬಾರಿ ಕಾರು ನೀಡಿದ ರಾಜ್ಯ ಸರ್ಕಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಸಭಾ ಸದಸ್ಯರಾಗಿ ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಗೆ ರಾಜ್ಯ ಸರ್ಕಾರ 60 ಲಕ್ಷ ರೂ ಮೌಲ್ಯದ ಕಾರನ್ನು ನೀಡಿದೆ.

ರಾಜ್ಯದಲ್ಲಿ ಸಂಚಾರ ನಡೆಸಲು ರಾಜ್ಯ ಸರ್ಕಾರ ವೋಲ್ವೊ ಎಕ್ಸ್ ಸಿ60 ಡಿ5 ಕಾರನ್ನು ನೀಡಿದೆ. ಈ ಮೂಲಕ ಅತಿ ದುಬಾರಿ ಸರ್ಕಾರಿ ಕಾರು ಬಳಕೆ ಮಾಡುತ್ತಿರುವ ರಾಜಕಾರಣಿ ಎಂಬ ಹಿರಿಮೆಗೂ ದೇವೇಗೌಡರು ಪಾತ್ರರಾಗಿದ್ದಾರೆ.

Home add -Advt

ತಮ್ಮ ಒಡಾಟಕ್ಕೆ ಹೊಸ ಕಾರು ನೀಡುವಂತೆ ಮಾಜಿ ಪ್ರಧಾನಿ ದೇವೇಗೌಡರು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ನಿರ್ಧಿಷ್ಟ ಕಾರಿನ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ. ಆದಾಗ್ಯೂ ರಾಜ್ಯ ಸರ್ಕಾರ ದುಬಾರಿ ಕಾರನ್ನು ನೀಡಿದೆ. ಈ ಕಾರಿನ ಮಾರುಕಟ್ಟೆ ಮೌಲ್ಯ 75 ಲಕ್ಷಕ್ಕೂ ಅಧಿಕ ಎನ್ನಲಾಗಿದೆ. ಆದರೆ ಸರ್ಕಾರದ ಹೆಸರಲ್ಲಿ ಕಾರು ನೋಂದಣಿಯಾಗುತ್ತಿರುವುದರಿಂದ ಕಾರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

Related Articles

Back to top button