Kannada NewsKarnataka NewsLatest

​ ಮತ್ತೆರಡು ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಎರಡು ಶಾಲೆಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.
​ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಪ್ರಯತ್ನದಿಂದ ಕ್ಷೇತ್ರದ ಕೋಳಿಕೊಪ್ಪ ಹಾಗೂ ​​ಕಮಕಾರಟ್ಟಿ ಗ್ರಾಮಗಳಲ್ಲಿ​ಯ ಶಾಲೆಗಳಿಗೆ​‌ ಲೋಕೋಪಯೋಗಿ ಇಲಾಖೆ​ಯಿಂದ ತಲಾ 10 ಲಕ್ಷ ರೂ. ಮಂಜೂರಾಗಿದೆ.​
ಎರಡೂ ಗ್ರಾಮಗಳ ಸರ್ಕಾರಿ‌ ಹಿರಿಯ ಪ್ರಾಥಮಿಕ ಶಾಲೆಗಳಿಗೆ‌ ತಲಾ ಒಂದೊಂದು ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗಳಿಗೆ​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಅನುಪಸ್ಥಿತಿಯಲ್ಲಿ​ ಸ್ಥಳೀಯ ಜನಪ್ರತಿನಿಧಿಗಳು​ ಹಾಗೂ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೃಣಾಲ ಹೆಬ್ಬಾಳಕರ ಅಧಿಕೃತವಾಗಿ ಚಾಲನೆಯನ್ನು ನೀಡಿದರು.
​ಕ್ಷೇತ್ರದಲ್ಲಿ ಪ್ರತಿನಿತ್ಯ ಕೊಟ್ಯಂತರ ರೂ. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಂಡಿರುವುದರಿಂದ ​ಭೂಮಿಪೂಜೆಗೆ ಆಗಮಿಸಲು ಸಾಧ್ಯವಾಗಿಲ್ಲ. ಅವರು ವಿವಿಧ ಯೋಜನೆಗಳಿಗೆ ಮಂಜೂರಾತಿ ಪಡೆಯಲು ಬೆಂಗಳೂರಿನಲ್ಲಿರಬೇಕಾದ ಸಂದರ್ಭದಲ್ಲೂ ಅಭಿವೃದ್ಧಿ ಕಾಮಗಾರಿ ನಿಲ್ಲುವುದಿಲ್ಲ. ಕಾಮಗಾರಿಗಳ ಗುಣಮಟ್ಟದ ಕಡೆಗೆ ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿಯವರು ಗಮನವಿಡಬೇಕು ಎಂದು ಮೃಣಾಲ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು.
​ ಈ ಸಂದರ್ಭದಲ್ಲಿ ಆ​ಯಾ​ ಗ್ರಾಮಗಳ ಹಿರಿಯರು,​ ಕಮಕಾರಟ್ಟಿ ಎಸ್ ಡಿ ಎಮ್ ಸಿ ಅಧ್ಯಕ್ಷ ಪ್ರಕಾಶ ಕಲ್ಲವಡ್ಡರ, ಗ್ರಾಮ ಪಂಚಾಯತ್ ಸದಸ್ಯ ರಾಜು ಜಾಧವ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಬಸವರಾಜ ನಾಯಕ, ಶಿವಾಜಿ ನಾಯಕ, ಹೂವಪ್ಪ ತಾರೇಕರ್, ಸೆಕ್ಷನ್ ಆಫಿಸರ್ ಹೊನ್ನಕಸ್ತೂರಿ, ಮಹಾವೀರ ಪಾಟೀಲ, ಅರ್ಜುನಗೌಡ ಪಾಟೀಲ, ಕೋಳಿಕೊಪ್ಪ ಗ್ರಾಮದ ಎಸ್ ಡಿ ಎಮ್ ಸಿ ಅಧ್ಯಕ್ಷ ರಮೇಶ ಹುಣಸಿಮರದ, ಉಪಾಧ್ಯಕ್ಷರಾದ ರೇಖಾ ಬಾ ಕಾಮನ್ನವರ, ಗ್ರಾಮ ಪಂಚಾಯತ್ ಸದಸ್ಯರಾದ ​ ಮಹಾದೇವಿ‌ ಬಾ ಪಾಟೀಲ,  ಯಲ್ಲನಗೌಡ ಮ ಪಾಟೀಲ, ಕೇದಾರಿ ಪಾಟೀಲ, ಬಾವುಕಣ್ಣಾ ಕಾಮನ್ನವರ, ಮಲ್ಲೇಶ ಪಟ್ಟಿಹಾಳ, ಯಲ್ಲಪ್ಪ ಲಕ್ಕನ್ನವರ, ಯಶವಂತ ಕೋಲಕಾರ, ರಾಮಾ ಪಾಟೀಲ, ಗುತ್ತಿಗೆದಾರರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button