ಪ್ರಗತಿವಾಹಿನಿ ಸುದ್ದಿ; ರಾಂಚಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಟಾಪರ್ ಗಳಿಗೆ ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹತೊ ಕಾರ್ ಗಿಫ್ಟ್ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಫಲಿತಾಂಶದ ವೇಳೆ ಟಾಪರ್ ಗಳಿಗೆ ಕಾರ್ ಗಿಫ್ಟ್ ನೀಡಲಾಗುವುದು ಎಂದು ಶಿಕ್ಷಣ ಸಚಿವರು ಘೋಷಿಸಿದ್ದರು. ಅದರಂತೆ ಇದೀಗ ಎಸ್.ಎಸ್.ಎಲ್.ಸಿಯಲ್ಲಿ ಟಾಪರ್ ಆಗಿರುವ ನೇತಾರ್ ರೆಸಿಡೆನ್ಸಿಯಲ್ ಸ್ಕೂಲ್ ನ ಮನೀಶ್ ಕುಮಾರ್ ಹಾಗೂ ಪಿಯುಸಿ ಟಾಪರ್ ಎಸ್ ಆರ್ ಎಸ್ ಎಸ್ ಆರ್ ಸ್ಕೂಲ್ ನ ಅಮಿತ್ ಕುಮಾರ್ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಶಿಕ್ಷಣ ಸಚಿವ ಜಗರ್ನಾಥ್ ಪರವಾಗಿ ಜಾರ್ಖಂಡ್ ವಿಧಾನಸಭಾ ಸ್ಪೀಕರ್ ರಬಿಂದ್ರನಾಥ್ ಮಾಥೋ ವಿದ್ಯಾರ್ಥಿಗಳಿಗೆ ಕಾರನ್ನು ಹಸ್ತಾಂತರಿಸಿದ್ದಾರೆ.
ಈ ವೇಳೆ ಮಾತನಾಡಿರುವ ಶಿಕ್ಷಣ ಸಚಿವ ಮಹತೊ ವಿದ್ಯಾರ್ಥಿಗಳಲ್ಲಿ ಶಿಕ್ಷನದ ಬಗ್ಗೆ ಒಲವು ಮೂಡಿಸಲು ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಟಾಪರ್ ಗಳಿಗೆ ಕಾರು ಉಡುಗೊರೆ ನೀಡಿದ್ದಾಗಿ ತಿಳಿಸಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ