ಪ್ರಾಗತಿವಾಹಿನಿ ಸುದ್ದಿ; ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಜೆಡಿಎಸ್ ವರಿಷ್ಠ ದೇವೇಗೌಡ, ವಿಭಿನ್ನ ರೀತಿಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಲು ದೇವೇಗೌಡರು ನಿರ್ಧಾರ ಮಾಡಿದ್ದು, ಇದಕ್ಕಾಗಿ ವಾರದ ವರದಿಯ ಟಾಸ್ಕ್ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಪ್ರತಿ ಜಿಲ್ಲೆ, ತಾಲೂಕು, ಬೂತ್ ಮಟ್ಟದಲ್ಲಿ ಮಾಡಿದ ಸಂಘಟನೆ ಬಗ್ಗೆ ಪ್ರತಿ ವಾರ ದೇವೇಗೌಡರಿಗೆ ವರದಿ ನೀಡೋದು ಕಡ್ಡಾಯ. ಪ್ರತಿ ವಾರ ತಮ್ಮ ತಮ್ಮ ವ್ಯಾಪ್ತಿಯ ಸಂಘಟನೆ ಬಗ್ಗೆ ಸಮಿತಿ ಮಾಹಿತಿ ನೀಡಬೇಕು.
ಜನವರಿ ಬಳಿಕ ಎಲ್ಲಾ ಜಿಲ್ಲೆ, ತಾಲೂಕು, ಬೂತ್ ಮಟ್ಟದ ಸಮಿತಿಗಳನ್ನ ಬದಲಾವಣೆ ಮಾಡೋ ಚಿಂತನೆಯಲ್ಲಿ ದೇವೇಗೌಡರು ಇದ್ದಾರೆ. ಹೊಸ ತಂಡಕ್ಕೆ ಪಕ್ಷ ಸಂಘಟನೆ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ಎಲ್ಲಾ ಹಂತದಲ್ಲೂ ಸಮಿತಿ ರಚನೆ ಮಾಡಲಿದ್ದಾರೆ. ಈ ಸಮಿತಿಯು ಪ್ರತಿವಾರ ತಾವು ಸಂಘಟನೆಗೆ ಮಾಡಿದ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಕಚೇರಿಗೆ ಕೊಡಬೇಕು. ಪಕ್ಷದ ಕಾರ್ಯಕ್ರಮಗಳು, ಸದಸ್ಯ ನೋಂದಣಿ, ಯೋಜನೆಗಳ ಕುರಿತ ಸಂಪೂರ್ಣ ಮಾಹಿತಿ ವಾರದ ವರದಿಯಲ್ಲಿ ಇರಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ