ಯತ್ನಾಳ್ ಗೆ ರಾಜಕೀಯ ಪುನರ್ ಜನ್ಮ ನೀಡಿದ್ದೇ ಮುರುಗೇಶ್ ನಿರಾಣಿ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮುರುಗೇಶ್ ನಿರಾಣಿ ಅವರು ರಾಜಕೀಯ ಪುನರ್ ಜನ್ಮ ನೀಡಿದ್ದಾರೆ.  ಅಧಿಕಾರ ಇಲ್ಲದಿದ್ದಾಗ ಅವನಿಗೆ ನಮ್ಮ ಕುಟುಂಬ ಸಹಾಯ ಮಾಡಿದೆ ಈಗ ನಮ್ಮ ವಿರುದ್ಧವೇ ನಾಲಿಗೆ ಹರಿ ಬಿಡುತ್ತಿದ್ದಾನೆ ಎಂದು ಸಂಗಮೇಶ್ ನಿರಾಣಿ ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ಒಬ್ಬ ಹರಕುಬಾಯಿ ಮನುಷ್ಯ. ಅಧಿಕಾರ ಇಲ್ಲದಿದ್ದಾಗ ನಮ್ಮ ಮನೆಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದಲ್ಲದೆ ನಮ್ಮ ಮನೆಯ ನಾಯಿ, ಬೆಕ್ಕಿನ ಕಾಲು ಹಿಡಿದಿದ್ದ. ಆತನಿಗೆ ರಾಜಕೀಯ ಪುನರ್ಜನ್ಮ ನೀಡಿದ್ದೇ ಮುರುಗೇಶ್ ನಿರಾಣಿ. ಹೀಗಿರುವಾಗ ಈಗ ಯತ್ನಾಳ್ ಒಬ್ಬ ಭಸ್ಮಾಸುರನಾಗಿದ್ದಾನೆ  ಎಂದು ಕಿಡಿಕಾರಿದರು.

Home add -Advt

ಅಧಿಕಾರ ಇಲ್ಲದಿದ್ದಾಗ ಅವನಿಗೆ ನಮ್ಮ ಕುಟುಂಬ ಸಹಾಯ ಮಾಡಿದೆ.  ಈ ಹಿಂದೆ ಅವನು ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಶಿ, ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧವೂ ನಾಲಿಗೆ ಹರಿಬಿಟ್ಟಿದ್ದ. ಇದೀಗ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಕ್ಕೆ ನಾನು ಬಹಿರಂಗವಾಗಿ ಮಾತನಾಡುತ್ತಿದ್ದೇನೆ. ನಮ್ಮ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

ಯತ್ನಾಳ್ ಎಲ್ಲ ಪಕ್ಷಗಳಲ್ಲೂ ತಿರುಗಾಡಿ ಬಂದಿದ್ದಾರೆ. ಬಿಜೆಪಿ ಮುಖಂಡರ ಬಗ್ಗೆ ನಾಲಿಗೆ ಹರಿಬಿಟ್ಟು, ದೇವೇಗೌಡರಿಗೆ ಜೀ ಹುಜುರ್ ಅಂತಿದ್ರು. ಈಗ ನಮ್ಮ ಕುಟುಂಬದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಅವರಿಗೆ ರಾಜಕೀಯ ನೈತಿಕತೆ, ಬದ್ಧತೆ ಯಾವುದು ಇಲ್ಲ ಎಂದು ಸಂಗಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

Related Articles

Back to top button