Belagavi NewsBelgaum NewsKannada NewsKarnataka NewsLatest

*ಯಲ್ಲಮ್ಮನಗುಡ್ಡದಲ್ಲಿ ಇರುವ ಅಂಗಡಿಗಳ ಮೇಲೆ ಧಿಕಾರಿಗಳ ದಾಳಿ: ಎಕ್ಸ್‌ಪೈರಿ ವಸ್ತು ಕೊಳೆತ ಆಹಾರ ಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ದೇವತೆ ಯಲ್ಲಮ್ಮನಗುಡ್ಡದಲ್ಲಿ ಇರುವ ಕುಂಕುಮ– ಭಂಡಾರ, ಕಿರಾಣಿ ಅಂಗಡಿಗಳ ಮೇಲೆ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕೀರಪುರ ಅವರ ನೇತೃತ್ವದಲ್ಲಿ ಈ ದಾಳಿ‌ ನಡೆಸಲಾಗಿದೆ.

ದಾಳಿ ವೇಳೆ ತಂಪು ಪಾನೀಯ ಮತ್ತು ಆಹಾರ ಪ್ಯಾಕೇಟ್​​ಗಳ ಮೇಲೆ ಎಕ್ಸ್‌ಪೈರಿ ಡೇಟ್‌ ಇಲ್ಲದೇ ಇರುವುದು ಆತಂಕ ಮೂಡಿಸಿದೆ. ಇಲ್ಲಿ ಮಾರಾಟ ಮಾಡುವ ವಸ್ತುಗಳ ಗುಣಮಟ್ಟ, ಎಕ್ಸ್‌ಪೈರಿ ದಿನಾಂಕ, ಅಂಗಡಿಗಳ ಪರವಾನಗಿ ನವೀಕರಣ ಪರೀಕ್ಷಿಸಲಾಯಿತು.

ದಾಳಿ ಕುರಿತು ಮಾಹಿತಿ ನೀಡಿರುವ ಪ್ರಭಾವತಿ ಫಕೀರಪುರ, ಹಲವು ಅಂಗಡಿಗಳಲ್ಲಿ ಮಾರಾಟ ಮಾಡುವ ತಂಪು ಪಾನೀಯಗಳ ಬಾಟಲಿಗಳು ಹಾಗೂ ಆಹಾರ ಪ್ಯಾಕೇಟ್‌ಗಳ ಮೇಲೆ, ಎಕ್ಸ್‌ಪೈರಿ ಡೇಟ್‌ ಇಲ್ಲ. ಕೆಲವರು ಪರವಾನಗಿ ಇಲ್ಲದೇ, ಪರವಾನಗಿ ನವೀಕರಿಸದೆ ವ್ಯವಹಾರ ಮಾಡುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದರು.

ಕೆಲವು ಹೋಟೆಲ್‌ನವರಿಂದ ಅಡುಗೆಗೆ ಕೊಳೆತ ತರಕಾರಿ ಬಳಸಲಾಗುತ್ತಿದೆ.‌‌ ಕುಂಕುಮ–ಭಂಡಾರ, ಕಿರಾಣಿ ಅಂಗಡಿಯಲ್ಲಿ ಔಷಧ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ನಿಯಮ ಮೀರಿ ವ್ಯವಹಾರ ಮಾಡುತ್ತಿರುವವರ ಅಂಗಡಿಗಳ ವಿದ್ಯುತ್‌, ನೀರಿನ ಸಂಪರ್ಕ ಕಡಿತ ಮಾಡಲಾಗುವುದು. ಇದು ಮುಂದುವರಿದರೆ ಶಿಸ್ತು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸಿದ್ಧ ಧಾರ್ಮಿಕ ಸ್ಥಳವಾದ ಯಲ್ಲಮ್ಮನ ಗುಡ್ಡಕ್ಕೆ ಇಡೀ ವರ್ಷ ಒಂದು ಕೋಟಿಗೂ ಹೆಚ್ಚು ಭಕ್ತರು ಆಗಮಿಸಿ ವಿವಿಧ ವಸ್ತುಗಳನ್ನು ಇಲ್ಲಿ ಖರೀದಿ ಮಾಡುತ್ತಾರೆ. ಹೀಗೆ ಬಂದ ಭಕ್ತರಿಗೆ ಯಾವುದೇ ವರ್ತಕರು ಮೋಸ ಮಾಡಬಾರದು ಎಂದು ಪ್ರಭಾವತಿ ಫಕೀರಪುರ ತಿಳಿಸಿದರು.‌

Related Articles

Back to top button