Politics

*ಸಾವಿರಾರು ಕೋಟಿ ಗಿಫ್ಟ್ ಆರೋಪ: HDK ವಿರುದ್ಧ ಹೊಸ ಬಾಂಬ್ ಸಿಡಿಸಿದ ಚಲುವರಾಯಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಚೆನ್ನಪಟ್ಟನ ಉಪಚುನಾವಣೆ ಮುಗಿಯುತ್ತಿದ್ದಂತೆಯೇ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ಸಾವಿರಾರು ಕೋಟಿ ರೂಪಾಯಿ ಗಿಫ್ಟ್ ಆರೋಪ ಮಾಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಕುಮರಸ್ವಾಮಿ ಅವರಿಗೆ ಬೇರೆ ಸಮಯದಲ್ಲಿ ಹಣ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಮಗನ ಚುನಾವಣೆ, ಮಗನ ಚುನಾವಣೆ ಎಂದು ಸಾಕಷ್ಟು ಗಿಫ್ಟ್ ಪಡೆದಿದ್ದಾರೆ. ದುಡ್ಡು ಖರ್ಚು ಮಾಡಿದ ತಕ್ಷಣ ಚುನಾವಣೆ ಗೆಲ್ಲಲ್ಲ. ಅವರ ಜೊತೆ ಫೈಟ್ ಮಾಡಲಾಗಲ್ಲ ಎಂದುದ್ದಾರೆ. ಬೈ ಎಲೆಕ್ಷನ್ ಗಾಗಿ ಕುಮಾರಸ್ವಾಮಿ ಕಂಪನಿಗಳಿಂದ ಸಾವಿರಾರು ಕೋಟಿ ರೂ ಗಿಫ್ಟ್ ಪದೆದುಕೊಂಡಿದ್ದಾರೆ ಎಂದು ಆರೋಪಿಸಿದರು.

40% ಹಗರಣ ಮಾಡಿದ್ದರಿಂದ ಬಿಜೆಪಿ ಸರ್ಕಾರ ಹೋಯ್ತು. ನಮ್ಮ ಸರ್ಕಾರ ಅಸ್ಥಿರಗೊಳಿಸಲು ಈಗ ಬಿಜೆಪಿ ಮತ್ತೆ ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button