Latest

ಇನ್ಮುಂದೆ ನಾನು ಕಣ್ಣೀರು ಹಾಕಲ್ಲ ಎಂದ ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಇನ್ಮುಂದೆ ನಾನು ಕಣ್ಣೀರು ಹಾಕಲ್ಲ, ಹಾಗಂತ ನಾನು ಕಟುಕ ಹೃದಯದವನಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಕುಮಾರಸ್ವಾಮಿ, ಜನರ ಕಷ್ಟವನ್ನು ಭಾವನಾತ್ಮಕವಾಗಿ ನೋಡಿದಾಗ ತಾನಾಗೇ ಕಣ್ಣೀರು ಬರುತ್ತೆ. ಹೃದಯ ಮಿಡಿಯುತ್ತೆ. ಆದರೆ ಇದನ್ನು ಕುಮಾರಸ್ವಾಮಿ ನಾಟಕ್ವಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಕನಕನಮರಡಿ ಬಸ್ ದುರಂತ ನಡೆದಾಗ ಅದನ್ನು ನೋಡಿ ಕಣ್ಣೀರು ಬಂತು. ಅದಕ್ಕೂ ಟವಲ್ ನಲ್ಲಿ ಗ್ಲೀಸರೀನ್ ಹಾಕೊಂಡು ಕುಮಾರಸ್ವಾಮಿ ಅಳುತ್ತಾರೆ ಎಂದು ಅನೇಕರು ವ್ಯಂಗ್ಯಮಾಡಿದರು. ಹಾಗಾಗಿ ಇನ್ಮುಂದೆ ಕಣ್ಣೀರು ಹಾಕಬಾರದು ಎಂದುಕೊಂಡಿದ್ದೇನೆ ಎಂದರು.

ಇದೇ ವೇಳೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರವಾಗಿ ನಾನು ಮೈತ್ರಿ ಮಾಡಿಕೊಳ್ಳುವುದಾಗಿ ಎಲ್ಲಿಯೂ ಹೇಳಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಯಡಿಯೂರಪ್ಪ ನಮ್ಮ ಸಹಕಾರ ಕೇಳಿದ್ದಾರೆ. ಆದರೆ ನಾವಿನ್ನೂ ಆ ಬಗ್ಗೆ ನಿರ್ಧರಿಸಿಲ್ಲ. ಬಿಜೆಪಿ ಅಭ್ಯರ್ಥಿಗಖು ನಮ್ಮ ಅಭ್ಯರ್ಥಿಗಳಿಗೆ ಬಿಜೆಪಿಯವರು ಸಹಕರಿಸುತ್ತಿಲ್ಲ. ಆದರೆ ನಮ್ಮ ಅಭ್ಯರ್ಥಿಗಳು ಇಲ್ಲದ ಕಡೆ ನಮ್ಮ ಸಹಕಾರ ನೀಡುವಂತೆ ಯಡಿಯೂರಪ್ಪ ಕೇಳಿದ್ದಾರೆ. ಕಾಂಗ್ರೆಸ್ ನವರು ಈವರೆಗೂ ಯಾವುದೇ ಸಹಕಾರ ಕೇಳಿಲ್ಲ. ಎರಡೂ ಪಕ್ಷಗಳು ನಮಗೆ ಶತ್ರುಗಳೇ, ಮಿತ್ರರಲ್ಲ. ಮೈತ್ರಿ ವಿಚಾರವಾಗಿ ನಾಳೆ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಘೋಷಿಸುವುದಾಗಿ ತಿಳಿಸಿದರು.

2023ರ ವಿಧಾನಸಭಾ ಚುನಾವಣೆ ಜೆಡಿಎಸ್ ಪಕ್ಷಕ್ಕೆ ಅಡಿಪಾಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ನಂಬರ್ ಗೇಮ್ ನಲ್ಲಿ ಸೋತಿರಬಹುದು ಆದರೆ ನೈತಿಕವಾಗಿ ಗೆಲುವು ಸಾಧಿಸಿದ್ದೇವೆ. ನಮ್ಮ ಪಕ್ಷದ ಖಜಾನೆ ಹಣದಿಂದ ತುಂಬಿಲ್ಲ, ಬದಲಾಗಿ ಜನರ ಪ್ರೀತಿಯಿಂದ ತುಂಬಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ: ವರಿಷ್ಠರ ಸಲಹೆ ಮೇರೆಗೆ ಕ್ರಮ- ಸಿಎಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button