Latest

*ಗ್ಯಾರಂಟಿ ಘೋಷಿಸುವಾಗ ಪರಿಜ್ಞಾನವಿರಲಿಲ್ವಾ?; ಸಿಎಂ, ಡಿಸಿಎಂ ವಿರುದ್ಧ ಹೆಚ್.ಡಿ.ಕೆ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಷರತ್ತು ವಿಧಿಸುತಿರುವ ವಿಚಾರವಾಗಿ ಕಿಡಿ ಕಾರುರುವ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ, ಗ್ಯಾರಂಟಿ ಘೋಷಿಸುವಾಗ ಸಿದ್ದರಾಮಯ್ಯನವರಿಗೆ, ಡಿ.ಕೆ.ಶಿವಕುಮಾರ್ ಅವರಿಗೆ ಪರಿಜ್ಞಾನವಿರಲಿಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕೆ, ಒಂದು ಗ್ಯಾರಂಟಿಯಲ್ಲ, 5 ಗ್ಯಾರಂಟಿಗಳಲ್ಲೂ ಗೊಂದಲಗಳಿವೆ. ಗ್ಯಾರಂಟಿ ಘೋಷಣೆ ಮಾಡುವಾಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ವಿಚಾರವಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇಂಧನ ಇಲಾಖೆ ಸಚಿವರು ಕೆ.ಜೆ.ಜಾರ್ಜ್ ಅವರಿಗೆ ಅರ್ಥವಾಗಿಲ್ಲ ಅನ್ನಿಸುತ್ತೆ. ಸಚಿವೆ ಹೆಬ್ಬಾಳ್ಕರ್ ಅವರಿಗೂ ಮಾಹಿತಿ ಇಲ್ಲ ಅನ್ನಿಸುತ್ತೆ. ಚುನಾವಣೆ ಪೂರ್ವದಲ್ಲಿ ಏನು ಘೋಷಣೆ ಮಾಡಿದ್ದರು? ಈಗ ಸಬೂಬು ಏನು ಕೊಡ್ತಿದ್ದಾರೆ? ಎಂದು ಕಿಡಿ ಕಾರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ದೋಸೆ ಬಗ್ಗೆ ಚರ್ಚೆಯಾಗ್ತಿದೆ. ಹೋಟೆಲ್ ನಲ್ಲಿ ದೋಸೆ ಫ್ರೀ ಎಂದು ಬೋರ್ಡ್ ಹಾಕಿ ಚಟ್ನಿ ಫ್ರೀ ಕೊದದ ರೀತಿ ಆಯ್ತು ಇವರ ಕಥೆ ಎಂದು ಟೀಕಿಸಿದ್ದಾರೆ. ಈಗ 15 ಲಕ್ಷ ಬಿಜೆಪಿಯವರು ಕೊಟ್ಟಿದ್ದಾರಾ ಎಂದು ಕೇಳುತ್ತಿದ್ದಾರೆ. ಬಿಜೆಪಿಅವರು ಕೊಟ್ಟಿಲ್ಲ ಅಂತ ನಾವೂ ಕೊಡಲ್ಲ ಅನ್ನೋದು ಎಷ್ಟು ಸರಿ ಎಂದು ಕೇಳಿದ್ದಾರೆ.

Home add -Advt

https://pragati.taskdun.com/siddaramaiahreactiongruhalakshmigruhajyoti-scheme/

Related Articles

Back to top button