Latest

*HDK ನೇತೃತ್ವದ JDS ಸಭೆ ದಿಢೀರ್ ರದ್ದು; ಹಾಸನ ಟಿಕೆಟ್ ಗೊಂದಲದಲ್ಲಿ ಬಿಗ್ ಟ್ವಿಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಾಸನ ಟಿಕೆಟ್ ವಿಚಹರವಾಗಿ ಇಂದು ಸಂಜೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆ ದಿಢೀರ್ ರದ್ದಾಗಿದೆ.

ಮಾಜಿ ಪ್ರಧಾನಿ, ಹೆಚ್.ಡಿ,ದೇವೇಗೌಡರು ಸಭೆ ರದ್ದು ಪಡಿಸಿದ್ದು, ತಾವೇ ಖುದ್ದಾಗಿ ಹಾಸನ ಕಾರ್ಯಕರ್ತರ ಜೊತೆ ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಇಂದು ನಡೆಯಬೇಕಿದ್ದ ಸಭೆ ರದ್ದಾದರೂ ಹಾಸನ ಟಿಕೆಟ್ ವಿಚಾರದಲ್ಲಿ ನನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದಿದ್ದಾರೆ. ನಾನು ಮತ್ತೆ ಹಾಸನ ಕಾರ್ಯಕರ್ತರ ಸಭೆ ಕರೆಯಲ್ಲ ಈ ಮೂಲಕ ಭವಾನಿ ರೇವಣ್ಣಗೆ ಟಿಕೆಟ್ ನೀಡಲು ನಿರಾಕರಿಸಿದ್ದಾರೆ.

ನಾನು ದೇವೇಗೌಡರ ಜೊತೆ ಮಾತನಾಡಿಲ್ಲ. ಬೇರೆಯವರಿಗೆ ದೇವೇಗೌರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ. ನಾನು ದೇವೇಗೌಡರ ಆರೋಗ್ಯವನ್ನು ಕೆಡಿಸಲು ಬಯಸಲ್ಲ. ಅವರಿಗೆ ಹಾಸನ ಟಿಕೆಟ್ ಗೊಂದಲ ಬಗೆ ಹರಿಸುವ ಶಕ್ತಿ ಇದೆ ಎಂದು ತಿಳಿಸಿದ್ದಾರೆ.

Home add -Advt

*ಬೆಂಕಿ ದುರಂತ; ದಂಪತಿ ಸಜೀವ ದಹನ*

https://pragati.taskdun.com/fire-accidentvijayapurahusbandwife-death/

Related Articles

Back to top button