Karnataka NewsLatestPolitics

*ಎರಡು ವರ್ಷದಿಂದ ಜೈಲಿನಲ್ಲಿರುವ ಆ ಹುಡಗನ ಕೈಲಿ ಸಿಗದ ಮೊಬೈಲ್ ಈಗ ಸಿಕ್ಕಿದ್ದು ಯಾಕೆ? ಸಿಎಂ ವಿರುದ್ಧವೇ ಕಿಡಿಕಾರಿದ ಹೆಚ್.ಡಿ.ಕೆ*

ಪ್ರಗತಿವಾಹಿನಿ ಸುದ್ದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಆ ಹುಡುಗ ಎರಡು ವರ್ಷದಿಂದ ಜೈಲಲ್ಲಿದ್ದಾನೆ. ಎರಡು ವರ್ಷದಿಂದ ಸಿಗದ ಮೊಬೈಲ್ ಈಗ ಹೇಗೆ ಸಿಕ್ಕಿದೆ? ಬಿಡದಿ ವಿಚಾರ ಬರುತ್ತಿದ್ದಂತೆ ಮೊಬೈಲ್ ಸಿಕ್ಕಿ ಬಿಡ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಎರಡು ವರ್ಷ ಜೈಲಿನಲ್ಲಿ ಸಿಗದ ಫೋನ್ ಈಗ ಬಿಡದಿ, ಕೆಪಿಎಸ್‌ಸಿ ಹಗರಣ, ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದದಲ್ಲಿ ಪೋನ್ ಸಿಕ್ಕಿದೆ. ಈಗ ಹೊಸ ಕಥೆ ಕಟ್ಟುತ್ತಿದ್ದಾರೆ. ದಿನಕ್ಕೊಂದು ಸಿರಿಸ್ ಬಿಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನನ್ನ ಮನೆ ಅಲುಗಾಡಿಸಿರುವುದು ಯಾರು ಎಂದು ನಿಮಗೆ ಗೊತ್ತಿದೆ. ಒಂದು ಸಾಕ್ಷಿ ರೆಡಿ ಮಾಡಲು ಸಾಕಾಗಿದೆ ಎಂದು ಯಾರು ಹೇಳಿದ್ದು? ದೇವೇಗೌಡರ ಕುಟುಂಬ ಮುಗಿಸುತ್ತೇವೆ ಎಂದು ಯಾರು ಹೇಳಿದ್ದು? ಈ ಮುಖ್ಯಮಂತ್ರಿನೇ ತಾನೇ ಎಂದು ಕಿಡಿಕಾರಿದ್ದಾರೆ.

ಎರಡು ವರ್ಷದಿಂದ ಫೋನ್ ಇಲ್ವಾ ಅವನ ಹತ್ತಿರ? ಈಗ ಬಂತಾ, ಜೈಲಲ್ಲಿ ಇರುವವನಿಗೆ ಅಶ್ಲೀಲ ಚಿತ್ರ ಕೊಟ್ಟಿದ್ದು ಯಾರು? ಆ ಅಶ್ಲೀಲ ಚಿತ್ರ ಎಲ್ಲಿಂದ ಜೈಲೊಳಗೆ ಬಂತು, ಯಾಕೆ ಬಂತು, ಯಾರು ಕೊಟ್ಟವರು? ಸಪ್ಲೈ ಮಾಡುವವರು ಯಾರು, ನಾವು ಮಾಡಿಸಿದ್ವಾ ಎಂದು ಪ್ರಶ್ನಿಸಿದ್ದಾರೆ.

ಬಿಡದಿಗೆ ವಿರೋಧ, ನೈಸ್‌ ಬಗ್ಗೆ ಕೋರ್ಟ್ ಆದೇಶ ಬಂತು, ಅದಕ್ಕೆ ಆ ಹುಡುಗನ ಹೆಸರು ಹೇಳಿ ದೇವೇಗೌಡರ ಕುಟುಂಬದ ಧ್ವನಿ ಮುಚ್ಚಿಸುತ್ತೀರಾ? ನಿಮ್ಮ ಕೈಯಲ್ಲಿ ಬಾಯಿ ಮುಚ್ಚಿಸಲು ಆಗುತ್ತಾ? ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ ಎಂದು ತಿರುಗೇಟು ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button