ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಮ್ಮನ್ನು ಬಿಜೆಪಿ ಬಿ ಟೀಂ ಎಂದು ಮಹಾನಾಯಕರು ಕರೆಯುತ್ತಿದ್ದಾರೆ. ನಾವು ಅಲ್ಪಸಂಖ್ಯಾತರನ್ನು ಮಾತ್ರವಲ್ಲ ಎಲ್ಲಾ ಸಮುದಾಯದವರನ್ನೂ ರಕ್ಷಣೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, 2018ರಲ್ಲಿ ಸಿದ್ದರಾಮಯ್ಯ, ಖರ್ಗೆ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಇದ್ರು. ನಮ್ಮ ಪಕ್ಷಕ್ಕೆ ನನ್ನ ಮಗನಿಗೆ ಸಿಎಂ ಸ್ಥಾನ ಬೇಡ ಅಂತ ದೇವೇಗೌಡರು ಹೇಳಿದ್ರು. ಕಾಂಗ್ರೆಸ್ ಕೇಂದ್ರ ನಾಯಕರು ಇಲ್ಲ ಕುಮರಸ್ವಾಮಿ ಸಿಎಂ ಆಗಬೇಕು ಎಂದರು. ಅವತ್ತೇ ಮಧ್ಯಾಹ್ನ 2 ಗಂಟೆಗೆ ಅಮಿತ್ ಶಾ ಅವರು ಕಾಲ್ ಮಾಡಿದ್ರು. ಅವತ್ತೇ ನಾನು ಒಪ್ಪಿದ್ದರೆ 5 ವರ್ಷಗಳ ಕಾಲ ಸಿಎಂ ಆಗಿ ಇರುತ್ತಿದ್ದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ದಸರಾ ಬಳಿಕ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸುತ್ತೇವೆ. ಎಷ್ಟು ಸೀಟು ಎಂಬುದು ದಸರಾ ಬಳಿಕ ತೀರ್ಮಾನವಾಗಲಿದೆ ಎಂದರು.
ಕಾವೇರಿ ನದಿ ನೀರಿನ ವಿಚಾರವಾಗಿ ಸೂಕ್ತವಾಗಿ ನಿರ್ಧಾರ ಕೈಗೊಳ್ಳಬೇಕು. ಈ ವಿಚರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಸರ್ಕಾರ ನಮ್ಮ ನಾಡಿನ ಜನರ ಹಿತ ರಕ್ಷಣೆಗೆ ಬದ್ಧವಾಗಬೇಕು. ಕಾವೇರಿ, ಮಹದಾಯಿ, ಹೇಮಾವತಿ ರಕ್ಷಣೆಗಾಗಿ ಮುಂದಾಗಬೇಕು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ