*3ರಲ್ಲ 35 ಶಾಸಕರಿಗೂ ಡಿಸಿಎಂ ಹುದ್ದೆ ಕೊಡಲಿ; ಕಾಂಗ್ರೆಸ್ ವಿರುದ್ಧ ವ್ಯಾಂಗ್ಯವಾಡಿದ HDK*
ಪ್ರಗತಿವಾಹಿನಿ ಸುದ್ದಿ; ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ವಿಚಾರ ಇದೀಗ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ನಿಲುವನ್ನು ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ನವರು ಯಾರದ್ದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ನೋಡಿಕೊಳ್ಳುವುದಕ್ಕೆ ಒಬ್ಬ ಅಧ್ಯಕ್ಷನನ್ನು ಮಾಡುತ್ತಿದ್ದಾರಂತೆ. ಈ ಯೋಜನೆಗಾಗಿ ಐವರು ಉಪಾಧ್ಯಕ್ಷರು ಬೇರೆ. ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 16 ಕೋಟಿ ಹಣ ಬೇಕು ಎನ್ನುತ್ತಿದ್ದಾರೆ. ಚುನವಣೆ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಇನ್ನು ಸರ್ಕಾರದ ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ, ಜಾತಿಗೊಂದು ಡಿಸಿಎಂ ಹುದ್ದೆ ಕೊಡಲಿ. ಕಾಂಗ್ರೆಸ್ ನವರು 30-35 ಶಾಸಕರಿಗೂ ಡಿಸಿಎಂ ಸ್ಥಾನ ನೀಡಲಿ. ಆಗ ಯಾವುದೇ ಸಮಸ್ಯೆಯೂ ಇರಲ್ಲ, ಗೊಂದಲವೂ ಇರಲ್ಲ ಎಂದು ಲೇವಡಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ